212 ತಂಗಾಳಿಯ ತಂಪಲ್ಲಿ ಬೆಳದಿಂಗಳ ಹಾದಿಯಲಿ
ತಂಗಾಳಿಯ ತಂಪಲ್ಲಿ ಬೆಳದಿಂಗಳ ಹಾದಿಯಲಿ
**************************************
ತಂಗಾಳಿಯ ತಂಪಿನ ಈ
ಬೆಳದಿಂಗಳ ಹಾದಿಯಲಿ
ನಿನ್ನೊಡನೆ ಇಡುವ ಹೆಜ್ಜೆ
ಸಗ್ಗದ ಸಿರಿಗೆ ಸಮ ಗೆಳೆಯ
ಅನುದಿನವೂ ನೀ ಇರಲು
ಜೊತೆಜೊತೆಯಲಿ ಬಾಳೆಲ್ಲ
ವಸಂತ ಚೈತ್ರದ ಸಂಭ್ರಮ
ಬಲ್ಲೆಯಾ ನೀ ಗೆಳೆಯಾ
ಬೆಳದಿಂಗಳಿನೀ ಇರುಳು
ನಿನ್ನ ಮೋಹಕ ನಗುವು
ಪಿಸುನುಡಿಯ ಆ ಮಾತು
ಪುಳಕಗೊಳಿಸಿದೆ ಗೆಳೆಯ
ಚಂದಿರನ ಮೊಗದ ಚೆಲುವ
ತಂದೆ ನೀ ಬಾಳಿಗೆ ಗೆಲುವ
ಜೊತೆಯಿರುವೆ ಎಂದೆಂದೂ
ನಾ ನಿನ್ನ ನೆರಳಾಗಿ ಗೆಳೆಯಾ
ಬಾಳಪಯಣದ ಜೊತೆಗಾರ
ಒಲವಿನಾಗಸದ ಚಂದಿರ
ಬದುಕ ಬಯಲಿಗೆ ಬೀರು ಬಾ
ತಂಪು ಬೆಳದಿಂಗಳ ಗೆಳೆಯಾ
ತಂಗಾಳಿಯ ತಂಪಿನ ಈ
ಬೆಳದಿಂಗಳ ಹಾದಿಯಲಿ
ನಿನ್ನೊಡನಾಟವೇ ಮಧುರ
ನವಿರುಭಾವ ಮೂಡಿದೆ ಗೆಳೆಯ
.. ಶೈಲೂ......
Comments
Post a Comment