211 ಕಾಲಾಯ ತಸ್ಮೈ ನಮಃ

ಕಾಲಾಯ ತಸ್ಮೈ ನಮಃ
   ********************

ಕಾಲದ ಅಡಿಯಾಳುಗಳೇ ಎಲ್ಲ
ಕಾಲ ಕಾಲಕೆ ಬಂದಂತೆ
ನಡೆಯುವ ಕಾಲನಿಗೆ#ಗಡಿಯಾರ ಸಮಯವ ತೋರಿಸುವ ಸಾಧನ
 ಕಾಲವನಳೆಯುವ ಮಾಪನ
ಪ್ರತಿ ಮಿಡಿತಕ್ಕೂ ಒಂದು ಸೆಕೆಂಡು
 ಸಾಗುತ್ತ ಉರುಳಿಸುವುದು ನಿಮಿಷ,  ಗಂಟೆ,  ದಿನ, ವಾರ
ಸರಿದಿದ್ದೇ ತಿಳಿಯದಂತೆ,  ಓಡುತ್ತಿದೆ ಜೀವನ ವ್ಯಾಪ೬. !
ತಲೆಬಾಗಲೇ ಬೇಕು ಎಲ್ಲ

ಆಗು ಹೋಗುಗಳ ಮಿತಿ
ಕಾಲನ ಕೈಯಲ್ಲಿ
ಜೊತೆಜೊತೆಗೆ ಸಾಗುವುದಷ್ಟೇ
ನಮ್ಮ ಮಿತಿಯಲಿ

ಬೇಡ ಬೇಡವೆಂದರೂ
ಉರುಳುತ್ತಿದೆ ಕಾಲ
ಸರಿಸಮಕೇ ನಡೆಯಬೇಕು
ಇಲ್ಲದಿರೆಲ್ಲಿಯ ಉಳಿಗಾಲ

ಎಷ್ಟೋ ಭೂತ ಗಳನ್ನ
ತನ್ನ ಗರ್ಭದಲ್ಲಡಗಿಸಿ
ಮತ್ತಷ್ಟು ಕಬಳಿಸುವ ಯತ್ನ
ಇತಿಹಾಸಗಳ ಮುಳುಗಿಸಿ

ವರ್ತಮಾನದಲಿಹೆವು 
ತಗ್ಗಿ ನಡೆಯಬೇಕು ಗೌರವಿಸಿ
ಭವಿಷ್ಯದೆಡೆಗೂ ಬೇಕು ಕೃಪೆ
ನಡೆ  ಕಾಲನಿಗೊಂದಿಸಿ

        ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ