210 ಬಾನಲ್ಲಿ ಮೂಡಿದೆ ಮೇಘ ಸಂದೇಶ


ಬಾನಲ್ಲಿ ಮೂಡಿದೆ ಮೇಘ ಸಂದೇಶ
*****************************

ಬರೆಯಲಿದೆ ನಿನಗೊಂದು ಪ್ರೇಮಕವಿತೆ
ತುಂಬಿ ಅದರಲ್ಲಿ ಅದಮ್ಯ ಪ್ರೀತಿ ಒರತೆ
ಅದಕೆಂದೆ ಕುಳಿತೆ ಕೈಯಲ್ಲಿಡುದು ಕುಂಚ
 ಗೆಳೆಯ ನೀನೇ ನನ್ನ ಸುಂದರ ಪ್ರಪಂಚ

ಅದೆಷ್ಟು ಹೇಳಲಿದೆ ಪ್ರೀತಿಯ ಸುವಿಚಾರ
ಮೇಳೈಸಿದೆಯಿಲ್ಲಿ ಪದಪುಂಜಗಳ  ಸಾಕಾರ
ಬಾನಲ್ಲಿ ಮೂಡಿದೆ ನೋಡು ಮೇಘ ಸಂದೇಶ
ಹೊತ್ತು ತರುವನಲ್ಲಿಗೆ ಮೇಘ ದೂತ

ಓದಿ ಬಿಡು ಗೆಳೆಯ ನನ್ನೆಲ್ಲ ಮನದ ಮಾತು
ಭಾವಿಸಿ ಬರೆದಿರುವೆ ಅಂತರಾಳದ ಪದಗಳಿನಿತು
ಕನವರಿಸುತ್ತ ಸುರಿದೆ ಒಲವ ಪ್ರೇಮಧಾರೆ
ಒಲವ ಗೆಳೆಯ ನೀನೇ ನನ್ನ ಬಾಳಿಗಾಸರೆ

ಕಾರತತೆಯಲಿ ಕಾಯ್ವೇ  ಮರು ಸಂದೇಶಕೆ
ಪ್ರೀತಿಯಲ್ಲಿ ನೀನಿತ್ತ ಒಲವ ಆದೇಶಕೆ
ಮೂಡಲಿ ಬಾನಲ್ಲಿ ಮೇಘ ಸಂದೇಶ
ನವಿರು ಭಾವವ ಬಿತ್ತುವ ನಿನ್ನೊಲವ ಪತ್ರ

          ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ