209 ಗಝಲ್

ಗಝಲ್
*******

ಹೇಳಲಿದೆ ಸಾವಿರ ಹೇಗೆ ಹೇಳಲಿ ಹೇಳು.?
ನಾಚಿಕೆಯಿದೆ ಪೂರ ಹೇಗೆ ಹೇಳಲಿ ಹೇಳು.?

ತಲೆಯೆತ್ತಿ ನೋಡಲೆಕೋ ಕಾಡುತಿದೆ ಲಜ್ಜೆ
ಹೃದಯವೇಕೋ ಭಾರ ಹೇಗೆ ಹೇಳಲಿ ಹೇಳು.?

ಕುಡಿಗಣ್ಣ ಸವಿನೋಟ ಅರ್ಥವಾಗದ ಮಾತೇ?
ಸಾಕಿನ್ನು ಸರದಾರ ಹೇಗೆ ಹೇಳಲಿ ಹೇಳು.?

ನಯನಗಳೇ ಬಿಡಿಸುತ್ತಿವೆ ಮನದ ಚಿತ್ತಾರ
ಆಸೆಗಳು ಭರಪೂರ ಹೇಗೆ ಹೇಳಲಿ ಹೇಳು.?

ಹೇಳ ಬಂದರೆ ಕಾಡಿ ಕಾಡಿಸುವೆ ಹೀಗೇಕೆ?
ನಿನ್ನದೇ ಸುವಿಚಾರ ಹೇಗೆ ಹೇಳಲಿ ಹೇಳು.?

ಅಳುಕುತಿದೆ ಎದೆ ಕಂಪಿಸುತಿದೆ ತನು
ಹಿಡಿಯಬಾರದೆ ಕರ ಹೇಗೆ ಹೇಳಲಿ ಹೇಳು.?

ಶೈಲ ಶರಣಾಗಿಯಾಯ್ತು ಬಿಚ್ಚಿಡಲಿನ್ನೇನಿದೆ.?
ಪ್ರೀತಿಯ ಮಹಾಪೂರ ಹೇಗೆ ಹೇಳಲಿ ಹೇಳು.?

ಚಿತ್ರ : ನಾಗೇಶ್ MN ಅವರ ವಾಲ್ನಿಂದ ತೊಗೊಂಡಿದ್ದು😊
ಥ್ಯಾಂಕ್ಯೂ ನಾಗೇಶ್ ಸರ್🙏😊
              ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ