208 ಜಡೆಕವನ ಶೀರ್ಷಿಕೆ : ಅಜ್ಜನ ಪ್ರೀತಿ ಸಜ್ಜಿಗೆಯಂತೆ

 ಜಡೆಕವನ
ಶೀರ್ಷಿಕೆ : ಅಜ್ಜನ ಪ್ರೀತಿ ಸಜ್ಜಿಗೆಯಂತೆ

ಅಜ್ಜನ ಪ್ರೀತಿ ಸಜ್ಜಿಗೆಯಂತೆ ಸಿಹಿ
ಸಿಹಿಯಾದ ಮಾತಿನಿಂದ ರಮಿಸುತ್ತ
ರಮಿಸುತ್ತಾ ಮೊಮ್ಮಕ್ಕಳೊಂದಿಗೆ ಆಡುವ
ಆಡುತ್ತ ಆಡುತ್ತಾ ತನ್ನನುಭವದ  
ಸಾರವ  

ಸಾರವ ಮೃದುಮಧುರ ಮಾತಲ್ಲಿ
ಮಾತಲ್ಲಿ ಕೃತಿಯಲ್ಲಿ ಸಪ್ರೇಮ ತುಂಬಿ
ತುಂಬಿ ಜೀವನಾಮೃತದ ಧಾರಾ
ಧಾರೆಯ ಎರಕಹೊಯ್ದು ತಿಳಿಸುತ್ತ

ತಿಳಿಸುತ್ತಾ ತುಂಬುತ್ತಾ ಧೈರ್ಯ
ಧೈರ್ಯದಿಂದ ಎದುರಿಸಲು ಕಷ್ಟನಷ್ಟ
ಕಷ್ಟನಷ್ಟಗಳ ನಿಭಾಯಿಸುವ ಕಲೆಯ
ಕಲೆಯ ಎಳೆಎಳೆಯಾಗಿ ಅರುಹಿ

ಅರುಹಿ, ತಿಳಿಸುತ್ತಾ ಜೀವನದ ಮೌಲ್ಯ
ಮೌಲ್ಯಾಧಾರಿತ ಜೀವನವ ನಡೆಸಲು
ನಡೆಸಲು ಮಾರ್ಗವ ತೋರುವ ಹಿರಿಯ
ಹಿರಿಯ ಈ ಜೀವ ಇರಲು ಮನೆ ಚಂದ
ಚಂದ ಅಜ್ಜ ನೀನಿರಲು ಮನಕಾನಂದ

          ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ