207 ಸಾಕುಮಾಡು ಮೌನ ಬಲ್ಲೆ ನಾ ನಿನ್ನ ಮನ

ಸಾಕುಮಾಡು ಮೌನ ಬಲ್ಲೆ ನಾ ನಿನ್ನ ಮನ
*********************************

ಏಕೋ ಇಂಥ ಬಿಂಕ ಬಿಗುಮಾನ
ಅಪರಾಧವೇನಿದೆ ನನ್ನದು?
ಅರಳು ಹುರಿದಂತೆ ಮಾತು
ಈ ನಡುವೆ ಏಕೋ ಕಾಣದು

ಮೌನವಾಗಿದೆ ಹಾಡುಹಕ್ಕಿ
ಏನಿದೆಯೋ ಕೋಪತಾಪ
ಮರೆತುಹೋಯಿತೇ ರಾಗ
ಯಾಕೋ ಈ ಪರಿ ತಾಪ

ನುಡಿಯಲಾರದೆ ಮನದ ವೀಣೆ
ಮಿಡಿವ ಹೃದಯ ಎಲ್ಲಿದೆ?
ಮುನಿಸೆಕೋ ವೈಣಿಕನಿಗೆ
ಹಿತವಾಗಿ ನಗಲೂ ಬಾರದೆ?

ಎಲ್ಲಿ ಹೋಯಿತು ಪ್ರೀತಿ
ಏಕಿಂಥ ದುರಭಿಮಾನ
ಸಾಕು ಮಾಡು.ಈ ಮೌನ
ಬಲ್ಲೆ ನಾ ನಿನ್ನ ಮನ

          ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು