206 ಚೈತ್ರ ತಂದ ಚಿಗುರಿನ ಹಾಗೆ ನಿನ್ನ ಸ್ನೇಹ

ಚೈತ್ರ ತಂದ ಚಿಗುರಿನ ಹಾಗೆ ನಿನ್ನ ಸ್ನೇಹ
*******************************

ಘಮ್ಮೆ0ದು ಅರಳಿದ ಹೂವಂತೆ ನಾನು
ಝೇಂಕರಿಪ ಭೃಂಗ ನಿನಗಾಗಿ ಕಾದಿರುವೆನು
ಬಂದು ಮುದಗೊಳಿಸು ಮನವನ್ನು
ಮಧುರ ಮೈತ್ರಿಗೆ ಮನ ತೆರೆದಿರುವೆನು

ಮಂಜು ಮುಸುಕಿದ ಮುಂಜಾವಿನಲಿ
ಚಟಪಟನೆ ಸುರಿವ ಮಳೆಹನಿಗೆ ತೆರೆದು
ಎದೆಯೊಡ್ಡಿ ನಿಂತಿರುವೆ ಪ್ರಕೃತಿಗೆ ತಲೆಬಾಗಿ
ನಲ್ಮೆಯ ಸ್ವಾಗತ ನಿನ್ನ ಬರುವಿಗಾಗಿ

ಕನಸು ಮನಸ್ಸಿನಲ್ಲೂ ಗೆಳೆಯ ನಿನ್ನ ಧ್ಯಾನ
ನಿನ್ನ ಮೋಹಕ ಚೆಲುವಿಗೆ ಮೆಚ್ಚಿತೀ ಮನ
ಚೆಲುವಿಗಿಂತಲೂ ಸ್ವಚ್ಛ ನಿನ್ನಯ ಮನವು
ಹಚ್ಚ ಹಸುರಿನ ಸೊಬಗಂತೆ ನಿನ್ನಿರುವು

ಬಣ್ಣನೆಗೆ ಸಿಗದ ಹೃದಯ ಶ್ರೀಮಂತಿಕೆ
ಸೋತು ತಲೆಬಾಗಿ ನಿಂತೆ ಮಧುರ.ಸ್ನೇಹಕೆ
ಇರಬಹುದೇ ನಮ್ಮೊಲವು ಜನುಮದ.ಬಂಧ?
ಸಗ್ಗದ ಸಿರಿ ಸ್ನೇಹ ಬೆಸೆದ.ಸಂಬಂಧ..!!

ಚೈತ್ರ ತಂದ ಚಿಗುರಿನ ಹಾಗೆ ನಿನ್ನ ಸ್ನೇಹ
ಅಂಕುರಿಸಿದೆ ಮನದೆ ನಿನ್ನ ಮೇಲಿನಿತು ಮೋಹ
ನಿತ್ಯ ನೂತನ ನಮ್ಮೀ ಪ್ರೇಮದನುಸಂಧಾನ
ಮೇಳೈಸಿದೆ ಮನದೊಳಗೆ ಸಂಭ್ರಮದ ತೊಂತನನ

             ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ