203.ಹೂವಾಡಗಿತ್ತಿ

ಹೂವಾಡಗಿತ್ತಿ
*************

ಹೂ ಮಾರಿಯಾದರೂ
ಹೊಟ್ಟೆ ಹೊರೆಯುತ್ತೇನೆ
ಬೇಡಿ ತಿನ್ನುವವಳಲ್ಲ !

ಹೊಟ್ಟೆ ತುಂಬುವುದಕ್ಕೆ
ಯಾವ ಕೆಲಸವಾದರೇನು
ಅವಮಾನ ವೆಂಬುದಿಲ್ಲ !

ಹಬ್ಬ ಬಂತಾದರೆ
ನಮಗ0ದೇ  ಹಬ್ಬ
ದುಡಿಮೆ  ಮರೆಯುವುದಿಲ್ಲ !

ಹಗಲಿರುಳಾದರೇನೂ
ಮಳೆಬಿಸಿಲಾದರೇನೂ
ಕಾಯಕವ ಮರೆತು ನಡೆದಿಲ್ಲ  !

ಹಾದಿ ಬದಿಯಲ್ಲಿ ಕುಳಿತು
ಬೀದಿಯೆಲ್ಲವ  ಸುತ್ತಿ
ಕಟ್ಟುತಿಹೆನು ನನ್ನಯಾ ಬದುಕ !

ಹೀಗಳೆದು, ಕಾಲೆಳೆದು
ಕಟುನುಡಿಯನಾಡದಿರಿ
ಇರಲೆಮ್ಮ  ಮೇಲೆ  ಮರುಕ !

ಹೂ, ಬೆಳೆವವರ  ಹರಿವವರ
ಮಾರುವವರ  ಪಾಡು
ಆ ದೇವ ನೊಬ್ಬ ತಾ ಬಲ್ಲ  !

ಹೆಸರಿಗಿಷ್ಟು,  ಕೊಸರಿಗಿಷ್ಟು
ಕೇಳುವಿರಿ ಎಷ್ಟೆಂದರಷ್ಟಕ್ಕೆ
ನಿಮಗೆ  ಕರುಣೆಯೇ ಇಲ್ಲವಲ್ಲ !

            ಶೈಲೂ ........

ಚಿತ್ರ ಕೃಪೆ :--  ಸ್ಮಿತಾ ಬಲ್ಲಾಳ್

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ