201 ಮತ್ತೆ ಮಳೆ

ಮತ್ತೆ ಮಳೆ
*********

ಹೋ !!!! 
ಮತ್ತೆ  ಮತ್ತೆ ಬಂದ ಮಳೆರಾಯ !!
ಏಕೆ ವರುಣ ನನ್ನವರ ಮೇಲೆ ನಿನಗೆ ಹೊಟ್ಟೆಕಿಚ್ಚು  ??
ಅವರು ಬರುವ ಸಮಯ ನೋಡಿಯೇ ಸುರಿಯುತ್ತೀಯ
ಏಕವರ ಮೇಲೆ ನಿನಗೆ ಸಿಟ್ಟು  ??
ನಾನವರನ್ನು ಇಷ್ಟಪಡುವುದು ನಿನಗೆ ಹೊರೆಯೇನು  ??
ನಮ್ಮ ಪ್ರೀತಿ ನಿನಗೆ ಕಣ್ಣು ಕುಕ್ಕುವುದೇನು ??
ನನ್ನನಳಿಸುವುದು  ನಿನಗಿಷ್ಟವೇನು  ??
ನಾನವರ ದಾರಿ ಕಾಯುವುದು ನಿನಗಸಹನೀಯವೇನು  ??
ನೀ ಹೀಗೆ ಸುರಿದರೆ ನಾನವರ ದಾರಿ ನೋಡುವುದಿಲ್ಲವೇನು ??
ನೀ ಹೀಗೆ ಸುರಿದಷ್ಟೂ ಹೆಚ್ಚುತ್ತದೆ ನಮ್ಮ ಪ್ರೀತಿ  ಗೊತ್ತೇ ನಿನಗೆ  ??
ನಾನವರ  ಮಡದಿ , ನನ್ನವರ ಬಿಟ್ಟು  ನಿನ್ನನ್ನಾಧರಿಸಲೇ  ??
ಕಾಲ ಕಾಲಕ್ಕೆ ಸುವೃಷ್ಟಿ ಗರೆದಿದ್ದರೆ ನಿನ್ನನಾಧರಿಸುತ್ತಿದ್ದೆ
ಆದರೆ ನೀನೋ  ಅತಿವೃಷ್ಟಿ, ಇಲ್ಲವೇ  ಅನಾವೃಷ್ಟಿ
ಜನಜೀವನವನ್ನು ತತ್ತರಗೊಳಿಸುತ್ತೀಯ
ನನ್ನವರಷ್ಟೇ ಅಲ್ಲ, ಮನೆಯಿಂದ ಹೊರಗುಳಿದವರ  ಪಾಡು, ಕಷ್ಟ ನಿನಗಿಷ್ಟವೇನು ??
ಎಲ್ಲ ಮನೆಯಲಿರುವಾಗ ಬಂದಿದ್ದರೆ ನಿನ್ನನ್ನಾಧರಿಸಿ  ಸಂಭ್ರಮಿಸುತ್ತಿದ್ದೆ,
ಈಗ ನಾನೊಬ್ಬಳೇ.... ನಿನ್ನ  ರುದ್ರ ನರ್ತನವ  ನಾ ಹೇಗೆ  ಸಹಿಸಲಿ....
ನಿನಗೆ, ನನ್ನವರ ತೋಯ್ದ ತೊಪ್ಪೆಯಾಗಿರಿಸಿದಾ ಖುಷಿ ಇದ್ದಿರಬಹುದು
ನನ್ನವರಿಗೆ ಘಾಸಿ ಮಾಡಿದಾ ಹಮ್ಮೂ  ಇರಬಹುದು 
ಆದರೆ ಅವರನ್ನ ಕಾಯಲು ನನ್ನ  ಕೃಷ್ಣನಿದ್ದಾನೆ  !!!!
ಮನೆಗೆ ಬಂದೊಡನೆಯೇ  ಆದರಿಸಲು  ನಾನಿದ್ದೇನೆ...
ನೀ ಧೋ ಎಂದು ಸುರಿದರೆ ನಾನ್ಹೆದರುವೆನೇನು...
ನನ್ನವರನ್ನು ಕಾಯಲು ಇದ್ದಾನೆನ್ನ ಮಾಧವನು !!!!!

            ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ