200 ಅರಸನಿಗಾಗಿ ಅರಸುತ "

" ಅರಸನಿಗಾಗಿ  ಅರಸುತ "
************************

ಹೇ  ಚೆಲುವರಸ ..!!
ನಿನ್ನನರಸುತ
ಅಲೆಯುತಿಹೆ
ಎಲ್ಲೆಲ್ಲೋ
ಎಲ್ಲಿರುವೆ ನೀನು..?
ನೀನಲ್ಲದಿನ್ನಾರು
ಚಿರಬಂದು ಎನಗೆ
ಅಂತರಾಳದಾ
ತಳಮಳ
ಅರಿವಿಲ್ಲವೇನು..?
ಕಾತರದ ಅಳಲಿನಾ
ಪರಿಪೂತ ಭಾವದಲಿ
ಹೃದಯ ದೇಗುಲದಿ
ಪ್ರತಿಷ್ಠಿಸುವಾ ತವಕ
ಅರ್ಥವಾಗದೇನೂ..?
ಜನ್ಮ ಜನ್ಮಾಂತರದ
ಸಂಸ್ಕಾರ ಫಲವೇನೋ
ನಿನ್ನರಿಸಿಯಾಗುವಾ
ಸೌಭಾಗ್ಯ
ನನಗಿಹುದು ಏನೋ..?
ನೀ ಉಸಿರೆನಗೆ
ಜೀವನದ  ಹಸಿರೆನಗೆ
ಈ  ಉಸಿರಿರುವರೆಗೆ
ನಿನ್ನನರಸುತ
ಕಾಯುವಳು
ನಿನ್ನರಸಿ .. ರಾಧೆ..

          ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು