198. ಮಂಕಾಯ್ತು ಮನವೇಕೋ
ಉಕ್ಕುಕ್ಕಿ ಬರುತ್ತಿದೆ ದುಃಖ
ನಗಬೇಕೆಂದರೂ ನಗಲಾಗದೇ
ಮನ ಹಿಡಿದಿಟ್ಟಿದೆ ನಗುವ
ಹೇಳಬೇಕೆಂದರೂ
ಹೇಳಲಾರದಾ ನೋವು
ಬಂಧಿಸಿಟ್ಟಿದೆ ಹೃದಯ
ಮನದ ಭಾವಗಳು
ಭಾವುಕವಾಗಿ
ಬಡಬಡಿಸಲಾರಾದೇ
ಮೌನತಾಳಿ ನಿಂತಿದೆ
ಕರಿಮೋಡಗಳು ಕವಿದು ಮನಕೆ
ನಗೆಯೇ0ಬ ಸೂರ್ಯನಾ
ಮರೆಮಾಚಿ ನಿಂತಿದೆ
ನೆನಪು ಗಳ ಸರಮಾಲೆ
ಕಣ್ಮುಂದೆ ತೂಗುತಿದೆ
ಮಧುರ ಮೈತ್ರಿಯಾ
ಮರೆಯಲು ಮನಸ್ಸಿಲ್ಲ
ನೆನೆಪಾಗಲು ನಾ ಮರೆತಿಲ್ಲ
ನಿನ್ನ ಸನಿಹಕ್ಕೆ
ನಾ ಬರಲಾಗುತಿಲ್ಲ
ದೂರವಿರಲೆಕೋ
ತನು ಛಿದ್ರವಾದಂತಾ ನೋವು
ಹೇಗೆ ಬದುಕಲಿ ಹೇಳು
ಪ್ರಿಯ ಮಾಧವಾ
ನೀನಿಟ್ಟಂತೆ ನಾನಿರುವೆ
ಕೊಟ್ಟದ್ದೆ ಅಮೃತ ಫಲವೆನುವೆ
ನೀ ಬಂದರೂ, ಬರದಿದ್ದರೂ
ಇಲ್ಲಿದ್ದರೂ, ನೀ ಎಲ್ಲೇ ಇದ್ದರೂ
ನಿನ್ನ ಕ್ಷೇಮ ಬಯಸುತ್ತಾ
ಹಿಡಿ ಜೀವವಾಗಿ
ಯುಗ ಕಳೆದರೂ
ಕಾಯುವಳು ನಿನಗಾಗಿ
ನಿರಂತರ ಕಾಯುವಿಕೆಯನ್ನೇ
ವರವಾಗಿ ಪಡೆದ ಈ ರಾಧೇ.....
ಶೈಲೂ......
Comments
Post a Comment