196. ಮನಸು ನಿಲ್ಲದು ಏಕೋ

🌷🌷🌷🌷🌷🌷🌷🌷

ಮನಸು ನಿಲ್ಲದು ಏಕೋ
ಮಾಧವನಾ ಮರೆತು
ಮೌನವಾಗಿರಲಾರೆ
ಮನದ ಮಂದಾರವು
ಮುದುಡಿಹೋಗಿದೆ
ಮೂಕವಾಗಿದೆ ಮನಸು
ಮಾಧವನವನೂ
ಮೌನತಾಳಿದ್ದಾನೆ
ಮನದ ಅಳುವಿಗೆ
ಮಾರ್ದನಿಯ
ಮೊರೆತವಿಲ್ಲ
ಮಂಕು ಬಡಿದಿದೆಯೆಕೋ
ಮನದ ಮಾತನು ಬಲ್ಲ
ಮಾಧವಗೆ  ಅದರರಿವಿಲ್ಲ
ಮೂಕರೋದನಕೆಡೆ ಮಾಡಿದೆ
ಮನಸು
ಮಾದಕ ಚೆಲುವಿನ
ಮೋಹಕ ರೂಪನ
ಮಾಧವ 
ಮನಮೋಹಕ ಮುರಳಿ
ಮರೆತಿರಬಹುದೆ ನ್ನ
ಮನ್ನಿಸೆನ್ನ ಮಾಧವ
ಮಧುರ ನೆನೆಪದು ಮರೆತು
ಮರಳಿ ಬದುಕಿರಲಾರೆ
ಮುನಿಸು ತೊರೆದು
ಮನಕೆ ಮುದವನು ನೀಡು
ಮರೆತಾದರೂ ನೀನು
ಮರೆಯದಿರು ಎನ್ನ

            ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ