195..ನಿನ್ನ ಕುಂಚದಲ್ಲಿ ಕಂಡೆ ನನ್ನನ್ನೇ

ಶೀರ್ಷಿಕೆ :--
ನಿನ್ನ ಕುಂಚದಲ್ಲಿ ಕಂಡೆ ನನ್ನನ್ನೇ
*************************

ಮುಚ್ಚಿದೀ ಕರದಿಂದ ಹೊರಬಂದಂತಿದೆ
ಬಿಚ್ಚುಗತ್ತಿಯ ಹಾಗೆ ನಯನದ್ವಯ
ತೀಕ್ಷ್ಣನೋಟದೆ ಅಂತರಂಗದೊಳಡಗಿರುವ
ಭಾವಗಳ ಹೊರಗೆಳೆದು ಬಿಚ್ಚಿಟ್ಟಂತೆ.!!

ಎದೆಯೊಳಗಡಗಿದ್ದ ಭಾವಗಳು
ಸರಸರನೆ ಒಂದರಿಂದೊಂದರಂತೆ
ಪದಪುಂಜಗಳಲ್ಲಡಗಿಸಿ ಚಂದದ
ಕವಿತೆಯಾಗಿಸಹೊರಟಂತಿದೆ ಚೆಂದುಟಿ

ಕರವು ಸೋಕಿದೊಡನೆ ಸಾಕು
ಪುಲಕಿತಗೊಂದು ಮೈಮರೆತು ನಾಚಿ
ಆ ಬಿಸಿಸ್ಪರ್ಷದಾಮೋದಕೆ ಕಂಪಿಸಿ
ಕೆಂಪಾದಂತೆ ಕಾಣುತ್ತಿವೆ ಕದಪುಗಳು

ಅದೆಷ್ಟು ಸ್ಪಷ್ಟ ಅರಿತಿರುವೆ.. ನಲ್ಲ..!!
ಮನದ ಕೊಳದೊಳದಗಿರುವ ಭಾವ ರತ್ನಗಳ
ನಿನ್ನ ಕಲೆಯಲ್ಲಡಗಿರುವ ಮನದಿಂಗಿತ
ನಿನ್ನ ಕುಂಚದಲ್ಲಿ ಕಂಡೆ ನನ್ನದೇ ಸ್ವಗತ.!!

           ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ