193 ಅಕ್ಕರೆಯ ಒಡಲಲ್ಲಿ ಸಕ್ಕರೆಯ ಸಿಹಿಗೊಂಬೆ

ಅಕ್ಕರೆಯ ಒಡಲಲ್ಲಿ ಸಕ್ಕರೆಯ ಸಿಹಿಗೊಂಬೆ
*********************************

ಕಂದ ನೀನೆನ್ನ ಬಾಳಜ್ಯೋತಿ
ಪ್ರಖರ ಬೆಳಕೀಯುವ ಪ್ರಣತಿ
ಬರಿದಾಗಿದ್ದ ಮಡಿಲ ತುಂಬಿದ ಕಂದ
ನೀನಗುತಿರೇ ಬಾಳೆಲ್ಲ ಆನಂದ

ಆ ತೊದಲ್ನುಡಿಯ ಮುದ್ದು ಮಾತು
ಸಿಹಿ ಜೇನ ಹನಿಗಿಂತಲೂ ಸೊಗಸು
ಮರದಲ್ಲಿ ಮರಹುಟ್ಟಿ ತಿನ್ನಲಾರದ
ಸವಿ ರುಚಿಯ ಅಮೃತಫಲ ನೀನು

ಮಗುವಾಗಿ ಬಂದೆ ನನ್ನ ಬಾಳಲ್ಲಿ
ನನ್ನದೇ ರುಧಿರ ಮಜ್ಜೆಯ ಹೊತ್ತ ಕರುಳಬಳ್ಳಿ
ಬದುಕು ಹಸನಾಗಿಸಿದ ಓ ಮುದ್ದು ಕಂದಾ
ತಾಯಿಯಾಗುವ ಸೌಭಾಗ್ಯ ಕಂದ ನಿನ್ನಿಂದ

ಬಾಳ ಬನದಲಿ ಮೆಲ್ಲನರಳಿದ ಸಂಪಿಗೆ
ನಿನ್ನ ನಗೆ ಬೆಳಕಲಿ ಬಾಳಾಯ್ತು ಹೊಸಬಗೆ
ಅಕ್ಕರೆಯ ಒಡಲಲ್ಲಿ ಸಕ್ಕರೆಯ ಸಿಹಿಗೊಂಬೆ
ಅನವರತ ಕಾಪಿಡಲಿ ನಿನ್ನ ತಾಯಿ ಜಗದಂಬೆ

            ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ