192 ಹೃದಯದಾಳದ ಕನಸು ಮನ ಬಿಚ್ಚಿದಾಗ

ಹೃದಯದಾಳದ ಕನಸು ಮನ ಬಿಚ್ಚಿದಾಗ
*********************************
ಮೂಡಿದೆ  ಮನದಲಿ ನವಿರಾದ ಕನಸೊಂದು
ತಟ್ಟಿ ಕರೆಯುತ್ತಿದೆ ಮೆಲ್ಲ ಮನಸೊಂದು
ಕನಸ ಕಲ್ಪನೆಯಲ್ಲಿ ನಾ ತೇಲುತಿರಲು
ತೂರಿ ಬಂತೆಲ್ಲಿಂದಲೋ ಸವಿ ಮಾತೊಂದು

ಮುದಗೊಂಡ ಮನದಲಿ ಮದನ ಸಂಚಾರ
ಗರಿಬಿಚ್ಚಿ ಹಾರುತಿದೆ ಬಯಕೆಗಳು ಪೂರಾ
ಹೃದಯ ಜೋಕಾಲಿಯಲಿ ಹಿತವಾದ ಕಂಪನ
ಜೀಕುತಿದೆ ಮನವೆಲ್ಲ ತುಂಬಿ ರೋಮಾಂಚನ.!

ಹಿತವಾದ ಸ್ಪರ್ಶಕೆ ತನು  ನಾಚಿ ನೀರಾಗಿ
ಚುಂಬಕದ ಸೆಳೆತಕೆ ಮನ ಉಲ್ಲಾಸದಿ ಬಾಗಿ
ಪುಳಕಿತವೀ ತನುಮನ ಎದೆಯಲ್ಲಿ ಪ್ರೇಮರಾಗ
ಹೃದಯ ತಂತಿಯ ವೀಣೆ ನೀ ಮೀಟಿದಾಗ

ಹೃದಯದಾಳದ ಕನಸು ಮನಬಿಚ್ಚಿದಾಗ
ಆಗಸದಲಿ ತೇಲಿದಂತೆ ಭಾಸ, ಮೂಡಿ ಅನುರಾಗ..!
ತನ್ಮಯತೆಯಲಿ ಹಾಡಿದೆ ಮನ ಒಲವಗೀತೆ
ಭಾವಾ0ತರಂಗದಲಿ ಗುನುಗುತ್ತಿದೆ ನಿನ್ನ ಮಾತೇ..!

               ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ