189.. ಕುಂತಿ

---: ಕುಂತಿ :---
************

ಯದುವಂಶ ರಾಜ ಶೂರಸೇನನಾ ಮಗಳು ಪೃಥೆ
ಕುಂತೀಭೋಜನಿಗೆ ದತ್ತುಮಗಳಾಗಿ ಕುಂತಿಯಾದದ್ದೇ ನಿನಗಾಯ್ತು ವ್ಯಥೆ

ಚಲುವಾಂತ ಚಲುವೆ ಕುಂತಿ ಕನಸು ಕಟ್ಟುವಾ  ಮೊದಲೇ
ದೂರ್ವಾಸ ಮುನಿಯ ಸೇವೆಗೆ ಕೊಟ್ಟಾಗಿತ್ತು  ಹೆಗಲು

ತೃಪ್ತ ದೂರ್ವಾಸ ಮುನಿ ಕೊಟ್ಟ ಸಂತಾನದಾ  ವರ..
ಕುತೂಹಲದ ಕಿಡಿಗೆ ಬಲಿಯಾಗಿ ಕರ್ಣ ತುಂಬಿದ ಉದರ

ರವಿಪುತ್ರನಂದಚಂದವಾ ಕಣ್ತುಂಬಿಕೊಳ್ಳಲು ಬೆದರಿ
ಗಂಗೆಗರ್ಪಿಸಿದಳವನ  ಲೋಕಾಪವಾದಕ್ಕೆ ಹೆದರಿ

ಪಾಪಪ್ರಜ್ಞೆ ಯಿಂದ ಬದುಕಿನುದ್ದಕ್ಕೂ ನರಳಿದ ನತದೃಷ್ಟ ಹುಡುಗಿ
ಹಸ್ತಿನಾವತಿ ದೊರೆ ಪಾಂಡುರಾಜನಾ ರಾಣಿಯಾದ ಬೆಡಗಿ

ಋಷಿಯ ಶಾಪಕ್ಕೀಡಾದ ಪತಿಯ ಸ್ಪರ್ಶಮಾಡದಾ ಅಸಹಾಯಕ ಪರಿಸ್ಥಿತಿ
ಆದರೂ ಸತೀತ್ವವನ್ನು ಹಂಚಿಕೊಂಡಳು  ಮಾದ್ರಿಎಂಬೋ  ಸವತಿ

ದೇವತೆಗಳ ಪೌರುಶಾಂಶದಿಂದ ತ್ರೈಲೋಕ್ಯವೀರ ಮಕ್ಕಳಾ ಪಡೆದ ಭಾಗ್ಯೆ
ದಾಯಾದಿ ಮತ್ಸರದ ಬೆಂಕಿಗೆ ಬಾಳಿನ ಸುಖವನ್ನೇ ಸುಟ್ಟುಕೊಂಡ ನಿರ್ಭಾಗ್ಯೆ

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲವೆಂಬುದೊಂದು ಉಕ್ತಿ
ಅಂತೂ ಇಂತೂ ಕುಂತಿಗೆ ಸುಖವೇ ಇಲ್ಲವೆಂಬುದೇ ನಿಜ ಸೂಕ್ತಿ

ಇವಳು ಕುಂತಿ...ದೊರೆಯ ಮಗಳಾಗಿ, ದೊರೆಯ ಸತಿಯಾಗಿ,ಮೂಲೋಕಶೂರ ಸುತರನ್ನು ಪಡೆದರೂ ತಪ್ಪಲಿಲ್ಲ ಬವಣೆ

ಬದುಕಿನುದ್ದಕ್ಕೂ ಪಡಬಾರಡಾ ಪಾಡುಪಟ್ಟು, ಅವಮಾನದ ಕಿಡಿಹಾಯ್ದು ಬೆಂದ  ಹೆಣ್ಣು ಜೀವಕ್ಕೆ ಆ  ದೇವನಿಗಿಲ್ಲ  ಕರುಣೆ 

ಏನಾದರೂ ತಾಯಿ ನಿನಗಾಯಿತೋ ತುಂಬಲಾರದಾ  ಅನ್ಯಾಯ
ಈ  ಪುರುಷ ಸಮಾಜದಲ್ಲೆಲ್ಲಿದೆ ನಿನ್ನಂತಹ  ಕುಂತಿಯರಿಗೆ  ನ್ಯಾಯ

          ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು