188. ಹಾಸ್ಯ ಕವನ.... ಮಾಡ್ಬೇಡ ಗಲಾಟೆ
ಮಾಡ್ಬೇಡ ಗಲಾಟೆ
***************
ಯಾಕೋ ನಿಂದತಿಯಾಯ್ತು
ಮಾಡಬೇಡ ಕಣೋ ತೀಟೆ
ಹಿರಿಯಣ್ಣ ನಾ ಹೇಳೋದು
ಕಿವಿಗ್ಬೀಳಲ್ವಾ ನಿಂಗೆ ಕೂಸೆ
ಬೇಡಾ ಅಂದಿದ್ದೇ ಮಾಡ್ತೀಯಾ
ಕಿವಿ ಹಿಂಡ್ತೀನಿ ನೋಡು
ಕೈಯಾಗಿದ್ದಿದ್ ಕಿತ್ಕೋತೀಯ
ಬಾರಿಸ್ತೀನೆರಡು ತಾಳು
ನೋಡಲ್ಲಿ ಗುಂಗುರು ಮುದ್ದು
ಕೂತಿಲ್ವಾ ತಂಟೆ ಮಾಡ್ದೆ
ಬಿಳಿ ಜಿರಳೆ ಮರಿ ನೀನು
ಕಿತಾಪತಿಯೆಲ್ಲ ನಿಂದೇ
ಹೀಗೆ ಮಾಡ್ತಿರು.. ಅಮ್ಮಂಗೇಳಿ
ಕೊಡುಸ್ತೀನಿ ಬಿಸಿ ಕಜ್ಜಾಯ
ಬೆತ್ತ ಹಿಡಿದು ನಾಲಕ್ಬಾರ್ಸಿದ್ರೆ
ನಿನ್ಭಂಡತನವೆಲ್ಲಾ ಮಾಯ
ಇಲ್ಲದ್ದನ್ನೇ ಬೇಕೋ ಅಂತೀಯ
ಮುದ್ದು ಮರಿನ ಅಳಸ್ತೀಯಾ
ಜೋರ್ಜೋರಾಗ್ ಅತ್ತುಕರೆದು
ರಂಪಮಾಡೆಲ್ಲರನ್ನ ಸತಾಯಿಸ್ತೀಯಾ
ಗಲಾಟೆ ಮಾಡಿದ್ರೆ.. ಅಮ್ಮಂಗೆ
ಕೋಪ ಬಂದು ಹೊಡೀತಾಳೆ
ಮುದ್ಮುದ್ದಾಗಿ ಆಟಾಡ್ಕೊಂಡಿದ್ರೆ
ಎತ್ಕೊಂಡು ಮುದ್ದಾಡಿಸ್ತಾಳೆ
ನನ್ಜಾಣ ನನ್ಮುದ್ದು ಬಂಗಾರ
ಕೇಳೋ ಸ್ವಲ್ಪ ಅಣ್ಣನ್ಮಾತು
ತಂಟೆ ಮಾಡ್ದೆ ಖುಶ್ಖುಷಿಯಾಗಿ
ಅಟಾಡೋಣ ಸುಮ್ನೆ ಕೂತು
ಶೈಲೂ.....
Comments
Post a Comment