185. ಆಕಾಶ್ ದೀಪವು ನೀನು

ಶೀರ್ಷಿಕೆ :
ಆಕಾಶ ದೀಪವು ನೀನು
********************

ಮನದ ಬಾನಂಗಳದ ಆಕಾಶ ದೀಪ
ಗೆಳೆಯ ನೀನೇ ಪ್ರೀತಿಯ ಪ್ರತಿರೂಪ
ಮನದೆ ರಾರಾಜಿಸುವ ಹುಣ್ಣಿಮೆ ಚಂದ್ರಮಾ
ನೀನೊಲಿದಂದಿನಿಂದ ಬಾಳೆಲ್ಲ ಸಂಭ್ರಮ

ಹೃದಯದಂಗಳದ ತುಂಬೆಲ್ಲ ಬೆಳದಿಂಗಳು
ಆಹ್ಲಾದವುಕ್ಕಿ ಮನದೆ ತುಂಬಿದೆ ಕಂಗಳು
ಬದುಕ ಕತ್ತಲೆಯ ಮರೆಮಾಚಿ ತಂದೆ ಬೆಳಕ
ಗೆಳೆಯ ನಿನ್ನ ಕಂಗಳ ಕಾಂತಿ ಬೆಳಗಿದೆ ಬದುಕ

ಬೆಳಗಿದೆ ಮನೆ ಮನವ ಹಚ್ಚಿ ನೀ ಹಣತೆ
ನಗೆಯ ಹೊನಲಲ್ಲಿ ನಾ ಸಂತಸವ ಕಾಣುತೆ
ನಡೆವೆ ನಿನ್ನನನುಸರಿಸಿ ಬಾಳಿನಾಂತ್ಯದ ವರೆಗೂ
ಕೈಹಿಡಿದು ನಡೆಸೆನ್ನ ನೀ ನನ್ನ ಬಾಳ ಮೆರುಗು

ಮುಸುಕಿರಲು ಮನದಲ್ಲಿ ನೋವ ಕರಿನೆರಳು
ಹಾಲ್ಬೆಳಕ ಚೆಲ್ಲಿ ಬೆಳಗಾಗಿಸು ಬಾ ಈ ಇರುಳು
ಆಗಸದ ಶಶಿಯಂತೆ ನೀ ಬಾಳ ಅಕಾಶದೀಪ
ತೊಳೆದಿರುವೆ ಬೆಳದಿಂಗಳಂತೆ ನನ್ನೆದೆಯ ತಾಪ

         ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ