184. ಕಲಿಕೆ ಕಬ್ಬಿಣದ ಕಡಲೆ ಅಲ್ಲ

ಕಲಿಕೆ ಕಬ್ಬಿಣದ ಕಡಲೆಯಲ್ಲ
************************
ಕಲಿಕೆಯೇನು ಕಬ್ಬಿಣದ ಕಡಲೆಯಲ್ಲ
ಮನವನಿಟ್ಟು ಕಲಿಯಬೇಕಷ್ಠೆ
ವಯಸ್ಸಿನ ನಿರ್ಬಂಧವೂ ಇಲ್ಲ
ಮನಸ್ಸಿದ್ದರೆ ಮಾರ್ಗ ತಿಳಿಯಬೇಕಷ್ಠೆ

ದುಡ್ಡಿರಬಹುದು ಜಗಕೆ ದೊಡ್ಡಪ್ಪ
ಗೊತ್ತೇನು? ವಿದ್ಯೆ ಅವರಪ್ಪ..!!
ಸಾಧಿಸುವ ಚಲವಿದ್ದರಷ್ಟೇ ಸಾಕು
ನಿರಂತರ ಕಲಿಕೆಗೆ ಇನ್ನೇನು ಬೇಕು?

ಐಶ್ವರ್ಯ ಹಣಕ್ಕೆ ಹಾಕಬಹುದು ಕನ್ನ
ಮಸ್ತಕದ ವಿದ್ಯೆ ಕದಿಯಲಾರದ ಚಿನ್ನ
ಉತ್ತಮ ಕಲಿಕೆಗೆ ಇರಬೇಕು ಯೋಗ್ಯತೆ
ಗೊತ್ತೇನು? ವಿದ್ವಾನ್ ಸರ್ವತ್ರ ಪೂಜ್ಯತೆ

ಮುಂದೆ ಗುರಿ, ಹಿಂದೆ ಗುರುವಿದ್ದರೆ ಸಾಕು
ಜೊತೆಗೊಂದಷ್ಟು ಕಲಿಕೆಗೆ ಶ್ರದ್ಧೆ ಇರಬೇಕು
ಏಕಾಗ್ರತೆಯಲಿ ಕಲಿಕೆಡೆಕೊಟ್ಟರೆ ಸಾಕು
ಕಲೆಕೆ ಕಬ್ಬಿಣದ ಕಡಲೆಯಲ್ಲ ಎಂದಿಗೂ

         ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ