183. ಹಾಸ್ಯ ಕವನ,(ಏನ್ ಬರೀಲಿ ಹಾಸ್ಯ)
ವಿಷಯ:- ಹಾಸ್ಯ ಕವನ
ಶೀರ್ಷಿಕೆ:-- ಏನ್ಬರೀಲಿ ಹಾಸ್ಯ
ಎನ್ಬರೀಲಿ ಹಾಸ್ಯಾ?
ಇದ್ಯಾಕೋ ತಲೆ ಕೆಡೋ ವಿಸ್ಯಾ
ಏನೂ ತಲೀಗ್ ಹೊಳೀತಿಲ್ಲ
ಏನ್ ಬರೀಲಿ ಸಿಸ್ಯಾ?
ಅಡ್ಗೆ ವಿಸ್ಯ ಬರ್ಯಾಣ ಅಂದ್ರೆ
ನಂಗ್ಸರ್ಯಾಗ್ ಮಾಡಕ್ಕೇ ಬರಲ್ದು
ಪ್ರೀತಿ ಪ್ರೇಮ ಬರ್ಯೋದಂದ್ರೆ
ಯಾಕೋ ಬಲು ಹೆದ್ರಿಕೆ
ಸ್ಕೂಲಿನ್ ತರ್ಲೆ ಹೇಳೋನಾಂದ್ರೆ
ನನ್ಮರ್ವಾದೆ ನಾನೇ ತೆಗ್ದಂಗೆ
ಕಾಲೇಜ್ ವಿಸ್ಯಾ ಬ್ಯಾಡಾ ದೇವ್ರೇ
ನೆನ್ಸ್ಕಂಡ್ರೆ ಭಯ ಆಯ್ತದೆ
ಹುಡ್ಗುನ್ ನೋಡಿದ್ ವಿಸ್ಯ ಹೇಳ್ದ್ರೆ
ನನ್ಮರ್ವಾದೆನೇ ಮಾಯಾ
ಇನ್ಮದ್ವೇ ಮಕ್ಕಳ ವಿಸ್ಯ
ಹೆಂಗೇಳ್ಳೊ ಮಾರಾಯ
ಕೆಲ್ಸ ಮಾಡಿದ್ ವಿಸ್ಯಾ ಕೇಳ್ದ್ರೆ
ಬಾಯ್ಬಾಯ್ ಬಿಟ್ ನಗ್ತೀರಿ
ತೋಚಿದ್ ಗೀಚಿಡ್ ಕವಿತೆ ಓದಿದ್ರೆ
ಇದು ಐಲೋ ಪೈಲೋ ಅಂತೀರಿ
ಇನ್ನೇನ್ ಬರೀಲಿ ಗೊತ್ತಾಗ್ತಿಲ್ಲ
ತಲೆ ತುಂಬಾ ಜೇಡಿಮಣ್ಣು
ತೆಪ್ಪಾಗಿದ್ರೆ ಹೊಟ್ಟೆಗಾಕ್ಕಳಿ
ನಾನಂತೂ ಮುಗ್ದ ಹೆಣ್ಣು
ದಿನಾ ನಡ್ಯೋ ಮನೆವಾರ್ತೆ
ಎಲ್ರ ಮನೆಲೂ ಇದ್ದದ್ದೇ
ಆದ್ರೂ ಒಂದೆಳ್ತೀನ್ ಕೇಳು
ದರ್ಬಾರ್ಮಾತ್ರ ಹೆಂಡ್ತೀದೇ
ಶೈಲೂ....
Comments
Post a Comment