182. ರೂಪಾಂತರ ಕವನ (ಅಮೃತ ವಾರ್ಷಿಣಿ)

ಚಲನಚಿತ್ರ ಗೀತೆಯ ರೂಪಾಂತರ##
ಚಿತ್ರ : ಅಮೃತವರ್ಷಿಣಿ
ಹಾಡು : ಈ ಸುಂದರ ಬೆಳದಿಂಗಳ

ನನ್ನ ಕವಿತೆ....
 ಈ ಸುಂದರ ಮನೆಯಂಗಳ
************************
ಈ ಸುಂದರ ಮನೆಯಂಗಳ ಈ ತಂಪಿನ ಸಂಜೆಯಲಿ ನನ್ನ ನಿನ್ನ ನಡುವಿನಲಿ...
ಈ ಸುಂದರ ಮನೆಯಂಗಳ ಈ ತಂಪಿನ ಸಂಜೆಯಲಿ ಬೇಸರದ ಮಾತಿನಲೀ...
ನಿನದೇ ಹೇಳಿಕೆ... ನನದೇ ತಾಳಿಕೆ.. 
ನಿನ್ನ ಈ ಮಾತಿನ ಚಕಮಕಿಯಲ್ಲಿ...ಓಹೋ...
|| ಈ ಸುಂದರ ||

ದಿನಾ ದಿನಾ ಪ್ರತೀ ದಿನಾ ಚಿನ್ನ ನಿನ್ನ ಮಾತಿಗೆ ಓಗೊಡುವೇ...
ನನ್ನಾ ಮನ ರೋಸಿದ್ದರೂ ನಿನ್ನ ಮಾತಿಗೆ ಬೆಲೆ ಕೊಡುವೆ...
ಒಲವೇ.... ಒಲವೇ ನಿನ್ನ ಮಾತೊಂದೇ ಆಜ್ಞೆಯೆನುತ ನಾ ತಿಳಿವೇ...
|| ಈ ಸುಂದರ ||

ಸಮಾ ..ಸಮ.. ಸರೀಸಮ ವಾಗ್ವಾದದೆ ಇಂಥ ಜಗಳ ಇದೆ ಮೊದಲೂ..
ಪ್ರೀತಿ ..ಪ್ರೇಮ ಎಲ್ಲೋಯ್ತೋ ಕಾಣೆ.. ಮಾತೆಲ್ಲಾ ಬರೀ ತೊದಲೂ...
ಉಸಿರೇ..... ಉಸಿರೇ ನಿನ್ನ ಪ್ರೀತಿಗಾಗಿ ಈ ಉಸಿರಾ ಹಿಡಿದಿರುವೇ....
ನಮ್ಮ ಜಗಳವು ಕೊನೆಯಾಗಲಿ.. ಪ್ರೀತಿಯ ಕಲರವವೇ...
ನಿನ ಮನಸಿನ ಸವಿ ನುಡಿಗೆ ನನ್ನ ಪ್ರೀತಿಯ ಹೊಳೆ ಹರಿಸಿ
ನನ್ನ ಬಾಳಿಗೆ ಹೊಸಕನಸು ತರಿಸಿ ತರಿಸಿ ನನಸಾಗಿಸುವೇ..
|| ಈ ಸುಂದರ ||

          ಶೈಲಜಾ ರಮೇಶ್

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ