178ಮಿಡಿದಿದೆ ಎನ್ನಂತರಂಗ

ಮಿಡಿದಿದೆ ನನ್ನ ಅಂತರಂಗ
**********************
( ರುಬಾಯಿ ಮಾದರಿಯಲ್ಲಿ )
ಮಿಡಿದಿದೆ ನನ್ನ ಅಂತರಂಗ ನಿನಗಾಗಿ
ಎಲ್ಲಿರುವೆ ಗೆಳತಿ ಬರಬಾರದೆ ನನಗಾಗಿ
ನಿನ್ಹೆಸರ ಕೂಗಿ ಕೂಗಿ ಬೇಸತ್ತಿದೆ ಹೃದಯ
ಕಾಯ್ದು ಸೋತೆನಲ್ಲೇ ನಿನ್ನ ಬರುವಿಗಾಗಿ

ಮರೆತೆಯೇಕೆ ಗೆಳತಿ ನಾನಿತ್ತ  ನಿಜ ಪ್ರೀತಿ
ಅರಿಯದೇ ಹೋದೆಯೇಕೆ ಇರಲಿಲ್ಲವೇ ಮತಿ
ಸಕಾರಣವಿಲ್ಲದೇ ತೊರೆದು ಹೋದದ್ದೇಕೆ?
ಕೊರಗುತ್ತಿರುವೆ ನಿನ್ನ ನೆನಪಲ್ಲೇ ದಿನಂಪ್ರತಿ

ಕಂದದ್ದೇನು ನನ್ನ ಪ್ರೇಮದಲ್ಲಿ ಹುಳುಕು?
ಸದಾ ನಿನ್ನ ಸವಿಮಾತಿನದೇ ನೆನಪ ಮೆಲುಕು
ಎರೆದಿದ್ದೇನಲ್ಲೇ ಪ್ರೀತಿಯ ಸವಿ ಸವಿ ಧಾರೆ
ದಿಟವಿರಬಹುದು ನೀ ತೋರಿದ್ದೆಲ್ಲಾ ಬರೀ ತಳಕು

ಆದರೂ ಮಿಡಿದಿದೆ ನಿನಗಾಗಿ ನನ್ನಂತರಂಗ
ನವಿರಾದ ಭಾವವಿತ್ತಿತ್ತು ಮನಕೆ ನಿನ್ನ ಸಂಗ
ಸುಖವಾಗಿರು ಗೆಳತಿ ನೀನೆಲ್ಲಿದ್ದರೂ ಸರಿ
ಮನದಲ್ಲೊಂದಾಸೆ ತಾಕಬಹುದು ನಿನಗೆ ಪ್ರೇಮತರಂಗ

          ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ