175. ಸ್ವಾತಿ ಮುತ್ತಿನ ಮಳೆ


#ಸ್ವಾತಿ_ಮುತ್ತಿನ_ಮಳೆಹನಿಯೇ

ಮೆರೆದಿದೆ ಆಗಸದಿ ಮೋಡಗಳ ಚಿತ್ತಾರ
ಒಂದಕ್ಕೊಂದು ಸೇರಿ ಆಗಿದೆ ಬಲು ಭಾರ
ಧರೆಗಿಳಿಯಲು ಕಾಡಿದಿದೆ ಹನಿಹನಿಯಾಗಿ
ತಣಿಸುವ ಸ್ವಾತಿ ಮುತ್ತಿನ ಮಳೆಹನಿಯಾಗಿ

ಬೀಸುತ್ತಿದೆ ಮುಂಗಾರು ಮಳೆ ಮಾರುತ
ಭುವಿಯ ತಾಪವ ತಣಿಸಿ ಉಸಿರಾಗುತ
ರೈತಾಪಿ ವರ್ಗದಲಿ ನಗೆಯ ಚಿಲುಮೆ
ಭರದಿಂದ ಸಾಗಿದೆ ಭೂಮಿಯಲಿ ಉಳುಮೆ

ಸ್ವಾತಿ ಮುತ್ತಂತೆ ಧರೆಗಿಳಿದು ಬಾ ಮಳೆ
ಹಸಿರುಟ್ಟು ಮೆರೆಯಲಿ ಬರಡಾದ ಇಳೆ
ಜೀವಸಂಕುಲವನುಳಿಸೆ ಹುಲುಸಾಗಿ ಬೆಳೆ
ಧಾನ್ಯಾಭಿವೃದ್ಧಿಗೊಳಿಸೆಲ್ಲರ ಹಸಿವೆ ನೀಗಿಸೆಲೆ

          ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ