174. ಮನದ ಮಾತು

ಮನದ  ಮಾತು
*************

ಮನವು ಹೇಳುತಿದೆ
ಮನದೊಳಗಿನ ಮಾತು
ಮನವಿರಿಸಿ ಕೇಳಿದರೆ
ಮನವರಿಕೆಯಾದೀತು

ಮನದ ಮಾತಿದು ಕೇಳು
ಮನವನಾವರಿಸಿರುವೆ ನೀನು
ಮನ ಮತ್ತೆ.ಹೇಳುತಿದೆ
ಮನದೊಡೆಯ ನೀನು

ಮನದ ಭಿತ್ತಿಯೊಳಗೆ
ಮನಸಿಟ್ಟು ನೆಟ್ಟ ಚಿತ್ರ
ಮನಮುಟ್ಟುವಂತಿದೆ
ಮನದನ್ನ ನೀ ಕೇಳು

ಮನವೇಕಿಲ್ಲ ನಿನಗೆ.?
ಮನದ ಮಾತು ಕೇಳಲು
ಮನಸು ಮಾಡೆನ್ನ ಚೆನ್ನ
ಮನವನರಿತು ನೋಡು

ಮನದೊಳಗೆ ಮುಳುಗಿಹುದು
ಮನಸ್ಸೆಂಬ ಸ್ವಾತಿಮುತ್ತು
ಮನವಿತ್ತು  ಚಿತ್ತೈಸು
ಮನಸದು ನಿನ್ನದೇ ಸ್ವತ್ತು

            ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ