172. ಗತವೈಭವ

ಗತವೈಭವ
*********

ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ

ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು

ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ

ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ  ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ

ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ

           ಶೈಲೂ...

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ