171 ಕಾಗುಣಿತ ಕವನ ಕ ಕಾರದಲ್ಲಿ ಕೃಷ್ಣ

#ಕಾಗುಣಿತ_ಕವನ

#ಕ_ಕಾರದಲ್ಲಿ_ನನ್ನ_ಕೃಷ್ಣ

#ಕ   ಕರೆದರೂ ಕೇಳಿಸದವನಂತೆ ಕುಳಿತು
#ಕಾ ಕಾಡಿಸುವುದೇ ಅವನ ಲೀಲೆ
#ಕಿ   ಕಿರು ನಗೆಯ ಬೀರಿ ಸಮ್ಮೋಹಿಸಿ
#ಕೀ  ಕೀಲು ಗೊಂಬೆಯ ತೆರದಿ
#ಕು  ಕುಣಿಸುವನವ ಜಗನ್ನಾಟಕ  ಸೂತ್ರಧಾರ
#ಕೂ ಕೂಗಿ ಕರೆದು ಮನವಿತ್ತವರಿಗೆ ಒಲಿವನಂತೆ
#ಕೃ   ಕೃಪಾಳು ಅವನಂತೆ ನನ್ನ ಕೃಷ್ಣ ಮಾಧವ
#ಕೆ   ಕೆನೆ ಮೊಸರಿತ್ತವರಿಗೆ ಭಕ್ತಿಯಲಿ
#ಕೇ ಕೇಳದೆ ಕೊಡುವನಂತೆ ಸೌಭಾಗ್ಯ
#ಕೈ  ಕೈವಲ್ಯ ಧಾಮದಲಿ ಸಾಯುಜ್ಯ
#ಕೊ ಕೊಡುಗೈ ದಾನಿಯವ
#ಕೋ ಕೋರದೆಯೂ ನೀಡುವನು ಸಕಲವ
#ಕೌ  ಕೌಶಲ್ಯವಿತ್ತು ಸಕಲ ಕಾರ್ಯ ಸಾಧನೆಗೆ
#ಕಂ ಕಂಬನಿ ಬರದಂತೆ ಕಾಯುವ

           ಅವನೇ ನನ್ನ ಪ್ರಿಯಬಂಧು ಮಾಧವ

            ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ