170. ಕಾಗುಣಿತ ಕವನ ಕ ಕಾರದಲ್ಲಿ ಕೃಷ್ಣ

ಕಾಗುಣಿತ ಕವನ
"ಕ" ಕಾರದಲ್ಲಿ ಕೃಷ್ಣ😊

ಕನಸಲಿ ಬಂದವನು
ಕಾಡುತ್ತಲೇ ಇರುವ
ಕಿರು ನಗೆಯ ಬೀರುತ್ತಾ
ಕೀಲು ಬೊಂಬೆಯಂತೆ 
ಕುಣಿಸುವ ಅವನು
ಕೂಗಿ ಕೂಗಿ ಕರೆದರೂ
ಕೃಷ್ಣಾ..ಕೃಷ್ಣಾ ಎಂದರಚಿದರೂ
ಕೆನೆ ಮೊಸರ ಕೊಡುವೆನೆಂದರೂ
ಕೇಳಿಸದಂತೆ ನಟಿಸುವ
ಕೈ ಕೈ ಮುಗಿದರೂ ಇಲ್ಲ
ಕೊಳಲನೂದುತ್ತಲೇ
ಕೋಪಿಸಿದವನಂತೆ ನಟಿಸಿ
ಕೌತುಕವ ಮೆರೆಸುವ
ಕಂಡೂ ಕಾಣದಂತೆ
ಕ್ಹನ್ನಯ್ಯ ಕೃಷ್ಣ ಗೋಳಾಡಿಸುವ...😢😢

                     ಇದು ಸರಿಯೇ
                      ನೀವೇ ಹೇಳಿ?

       ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ