169. ನೀನಿಟ್ಟ ಹೆಜ್ಜೆ
***********
ಮನದ ಬಾಂದಳಕೆ ನೀನಿಟ್ಟ ಹೆಜ್ಜೆ
ಎಳೆಗರುವ ನೊಸಲಿನಲಿ ಉಲಿದಂತೆ ಗೆಜ್ಜೆ ||
ನೀ ಸುಳಿದ ಆ ಘಳಿಗೆ ನೆರೆಬಂತು ಹೊಳೆಗೆ
ಹಸಿರು ಮೇಳೈಸಿತ್ತು ಪೂರ ಧರೆಗೆ. ||
ಸುಳಿದಂತೆ ತಂಪಾದ ನವಿರು ಗಾಳಿ
ಸೆಳೆದೆಳೆದಡಗಿಸಿದಂತೆ ಕೆನ್ನೆಯ ಸುಳಿ. ||
ತಂಪಾದ ಭೂಗರ್ಭದಿ ಎಳೆಗರಿಕೆ ಮೊಳೆತಂತೆ
ಸಂಜೆ ಸೂರ್ಯನ ಹೊಂಬೆಳಕ ಹೊಳಪಂತೆ ||
ಹೊನ್ನಾಗಿತ್ತು ಮಣ್ಣು ಹಬ್ಬಿತ್ತು ತರುಲತೆ
ಎದೆಯ ಹೊತ್ತಿಗೆಯ ತುಂಬೆಲ್ಲ ನಿನ್ನದೇ ಕಥೆ ||
ಜಡವಾಗಿದ್ದ ಬದುಕಲ್ಲಿ ಬಿರಿದಂತೆ ಹೂವು
ಮರೆಯಾಗಿತ್ತು ಎಲ್ಲ ಜೀವಜೀವದ ನೋವು ||
ಶೈಲೂ......
Comments
Post a Comment