167. ಬರೆಯಲಾಗದ ಕವಿತೆ

ಬರೆಯಲಾಗದ ಕವಿತೆ...😞😞
******************

ಕವಿತೆಯೊಂದ ಬರೆಯಲೆಂದು ಕುಳಿತೆ
ಯಾಕೋ ಕಾಡುತ್ತಿದೆ ಪದಗಳ ಕೊರತೆ
ನಡುಗುವ ಕೈಯಲ್ಲಿ ಹಿಡಿಯಲಾಗದೆ ಲೇಖನಿ
ಯಾಕೋ ತಡವರಿಸಿದೆ ಒಡಲಾಳದ ಒಳದನಿ

ಎಲ್ಲಿ ಹುಡುಕಲಿ ಭಾವನೆಗಳ ಬಿಂಬಿಸುವ
ಸೂಕ್ತ ಪದಗಳ ಅರ್ಥಪೂರ್ಣ ವಾಕ್ಯ
ಹೊರಹೊಮ್ಮಲಾರದ ಭಾವನೆಗಳ ತಾಕಲಾಟದಲಿ
ಯಾಕೋ ಅಪ್ಪಿದೆ ಮನವು ಮೌನದ ಸಖ್ಯ

ಕಳೆಯಿತೆಲ್ಲಿ ಮನಸು ಬರೆಯುವುದೇ ಮರೆತು
ಯೋಚಿಸಿದರೂ ಸಿಗಲಿಲ್ಲ ಪದಗಳ ಥಾಲಿ
ವಿಷಯವಿದೆ ಬಹಳಷ್ಟು ಅರುಹಲಿದೆ ಮುಗಿಲಷ್ಟು
ಯಾಕೋ ಬರೆಯಲಾಗದು ಮನಸೆಲ್ಲ ಖಾಲಿ ಖಾಲಿ

ಎಲ್ಲಿ ಅಡಗಿದೆಯೋ ಪ್ರಾಸ ಭಾವನೆಗಳ ಮಿಡಿತ
ತಡಕಿದಷ್ಟೂ ದೂರ ಕೈಗೆಟುಕದ ನಿಹಾರಿಕೆ
ಮನೆಮಾಡಿತ್ತು ನಿರಾಶೆ ಬರೆಯಲಾಗದ ಹತಾಶೆ
ಯಾಕೋ ಸೊರಗಿದೆ ಲೇಖನಿ ಕವಿತೆಯಿಂದು ಮರೀಚಿಕೆ....😞😞😞

           ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ