166. ಅವನಿವ ಬಾಲ

ಆವನಿವ ಬಾಲ
************

ಆವನಿವ ಬಾಲ
ಬೀಸಿದ ಮಾಯದ ಜಾಲ
ಸೆಳೆದೆಳೆವುದೇ ಲೀಲ
ಮೂಜಗದ ಪಾಲ..!

ಜಗವನುಯ್ಯಾಲೆ ಮಾಡಿ
ತೂಗುವುದವನ ಮೋಡಿ
ಹೇಗಿರಬಹುದೆನ್ನೋ ಕುತೂಹಲ
ಅದಕ್ಕಾದನೇ ಮುದ್ದು ಬಾಲ

ಶುದ್ಧ ಬಿಳಿವಸ್ತ್ರದ ಜೋಲಿ ಹಾಸು
ಮಲಗಿದನದರಲ್ಲಿ ಮುದ್ದುಕೂಸು
ನೀಲಮೇಘವರ್ಣ ಪರಿಶುದ್ಧ ಮನ
ಮುದ್ದುಪಾದದ ಸೊಗ ಬೆರಗಾದೆನಾ.!

ಹಾಡಲೇನೆಂದು  ಲಾಲಿ
ಪದಪುಂಜವೇ ಖಾಲಿ ಖಾಲಿ
ಮಾಯೆಯಾವರಿಸಿ ಮನಕೆ
ಮರೆತೆನೆಲ್ಲ, ಸೋತೆ ಸೊಗಕೆ

ಹೊನ್ನ ಗೆಜ್ಜೆಯ ಮುದ್ದು ಪಾದ
ಜಗವನಳೆದ  ವಾಮನ ಪಾದ
ಅಹಲ್ಯೆಯ ಪೊರೆದ ಪಾದ
ಜಗವನುದ್ಧರಿಸುವ ಶ್ರೀಪಾದ

ಮೊಗವೇತಕೆ ? ಸಾಕು ಪಾದವೊಂದೇ
ಜಗದೊದ್ಧಾರಕೆ ಸಾಕು ಇದೊಂದೇ
ಎನಿಸಿ ನಿದ್ರಿಸಿರಬೇಕು ಹಾಯಾಗಿ
ಜಗವನುದರದೋಳ್ಧರಿಸಿ ಮಗುವಾಗಿ..

              ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು