163 ಮಾತಾಪಿತ ಮಾತಾಡುತ


ಮಾತಾಪಿತ ಮಾತಾಡುತ
**********************
ಲೋಕಾಭಿರಾಮದ ಮಾತು
ಪತಿ ಪತ್ನಿ ಜೊತೆ ಕುಳಿತು
ಇರಬಹುದು ಗಹನ ವಿಚಾರ
ಸೃಷ್ಠಿ ಸ್ಥಿತಿ ಲಯ ಕಾರ್ಯ ಮಹತ್ತರ

ಜಗವಾಗಿ  ತಾ ಉಯ್ಯಾಲೆ
ಜಗನ್ಮಾತಾಪಿತರ ಲೀಲೆ
ವಿರಮಿಸುತರಗಳಿಗೆ ಆಮೋದ
ತೂಗುತ್ತಾ ಮೋದ ವಿನೋದ

ಮಂದಸ್ಮಿತ ವದನ ಸೂತ್ರ
ಅರ್ಧನಿಮೀಲಿತ ನೇತ್ರ
ಪ್ರಕೃತಿ ಪುರುಷ ಸುಖಿಸುತ್ತ
ಆಡಿಹರೇನೋ ಮಾತ

ಹಿಂದಿದೆ ಬ್ರಹ್ಮಾಂಡ ಸುತ್ತುತ್ತ
ಗ್ರಹತಾರಾಗಣದ ಮೊತ್ತ
ಹಿಡಿದು ಕೈಯಲೆಲ್ಲ ಸೂತ್ರ
ಸೃಜಿಸಿ ಅನೇಕಾನೇಕ ಪಾತ್ರ

ಸರ್ವ ಕಾರ್ಯದ ನಡುವೆ ಕುಳಿತು
ವಿರಮಿಸಿ ಅವರಾಡೋ.ಮಾತು
ಅನಂತ ಅಪೂರ್ವ ಪೂರ್ವಪುಣ್ಯ 
ಸರಸಕೆ ಸಿಕ್ಕೀತಲ್ಲ ಸಮಯ..!!

ಏನಾಡಿರಬಹುದಂಥ ನುಡಿ?
ಕವಿಗೇನೋ ಕುತೂಹಲದ ಕಿಡಿ
ಸೃಷ್ಟಿಸ್ಥಿತ್ಯಂತರದ ವಿಷಯವೇ?
ವಿಷಯ ಅದಕ್ಕಿಂತಲೂ ಗಹನವೇ?

              ಶೈಲೂ........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ