159 ಅಮ್ಮಾ ಅಪ್ಪಿಕೋ ಎನ್ನ
ಅಮ್ಮಾ ಅಪ್ಪಿಕೋ ಎನ್ನ
*******************
ಅಮ್ಮಾ ಅಮ್ಮಾ ಎಂದು ಹಾತೊರೆದು ನಾ ಬಂದೆ
ಬಳಿಸಾರಿ ಪ್ರೀತಿಯಲ್ಲಿ ಪೊರೆಯೆನ್ನ ತಾಯೇ. ||
ಹೊಕ್ಕಿಹುದು ಹೃದಯದೊಳು ಹೆರತನದ ಹೆದರಿಕೆಯು
ಬದುಕ ಜಂಜಾಟದಲ್ಲಿ ಜೀವ ಸಿಕ್ಕಿಹುದು
ಬವಣೆಯ ಹುದುರೊಳಗೆ ಬುದ್ಧಿ ಮಂಕಾಗಿಹುದು
ನನ್ನತನವೇನಾಯ್ತೋ ಕಾಣದಾಗಿಹುದೂ. ||
ಎಲ್ಲೆಲ್ಲಿ ನೋಡಿದರೂ ಸಿಕ್ಕುಗಳು ಬದುಕಲ್ಲಿ
ನರಳಿ ಬದುಕಲು ಕಷ್ಟ ಕಾಯಬೇಕಿಲ್ಲಿ
ಬೆದರಿಕೆಯ ಮುಸುಕೊಳಗೆ ಉಸಿರು ಬಿಗಿದಂತಾಗಿ
ತಾಳಲಾರೆನು ತಾಯೇ ಪಾರುಗಾಣಿಸೆಲೇ. ||
ಸಿಲುಕಿ ನಿಂತಿಹೆ ನಾನು ಆಸೆ ಮಾಯೆಯ ಒಳಗೆ
ನೀಡು ನಾಮದ ಬಲವ ದಾಟುವೆ ಭವಸಾಗರವ
ಮುಚ್ಚುಮರೆ ಮಾಡದೇ ಎತ್ತಿ ನಿಲಿಸು ತಾಯೇ
ಹೊದಿಸಿ ಪ್ರೀತಿಯ ಸೆರಗ ಅಪ್ಪಿಕೊ ಎನ್ನ . ||
ಶೈಲೂ......
Comments
Post a Comment