157 ಹೊಟ್ಟೆ ಪಾಡು

ಹೊಟ್ಟೆ ಪಾಡು
************

ಸೂರ್ಯನುದಿಸುವ ಮೊದಲೇ
ಕಾರ್ಯಾರಂಭ.ದಿನಚರಿ
ಹಸಿದೊಟ್ಟೆಯ ತಣಿಸಬೇಕಲ್ಲವೇ
ಅದಕ್ಕೆಂದೇ ಹೊರಟೆ ಅರಸುತ್ತ ಗುರಿ

ಚಳಿಯೋ ಮಳೆಯೋ ಬಿಸಿಲೋ
ವಾತಾವರಣ ಹೇಗಿದ್ದರೂ ಸರಿ
ನಡೆಸಲೇ ಬೇಕಲ್ಲ ಕಾಯಕ
ಇದೆನ್ನ ನಂಬಿದವರ ತಣಿಸುವ ಪರಿ

ಗಾಳಿಇರದ ಸೈಕಲ್ಲೇರಿ ತುಳಿವ ಸಾಹಸ
ಉದರನಿಮಿತ್ತಂ ಬಹುಕೃತ ವೇಷ
ಬದುಕಿನ ಬವಣೆ ಹರಿಸಲೊಂದು ಮಾರ್ಗ
ನನ್ನದು ಬೆವರ್ಹರಿಸಿ ದುಡಿವ ವರ್ಗ

ಹೊರಡಬೇಕು ತ್ವರಿತ ತ್ವರಿತ
ಅಳುವ ಕಂದಮ್ಮನ ನಿಮಿತ್ತ
ಗಂಟಲ್ಹರಿವಂತೆ ಕೂಗಿ ಕೂಗಿ
ಮಾಡಬೇಕು ವ್ಯಾಪಾರ ಜಗ್ಗಿ

ಸರುಕು ಮುಗಿವವರೆಗೂ ಅಲೆತ
ದಣಿವಾದರೂ ಇಲ್ಲ ವಿರಾಮ
ಮುಗಿದೊಡನೆ ದಿನದ ವ್ಯಾಪಾರ
ನಾಳಿನ ತುತ್ತನ್ನಕೆ ಆರಾಮ

              ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ