152 ಜಲಧಾರೆ

ಜಲಧಾರೆ
*********

ಚಿಮ್ಮಿ ಹರಿಯುತ್ತಿದೆ  ಹಾಲ್ನೊರೆ
ಸುತ್ತೆಲ್ಲ  ಸಿಂಪರಿಸಿ ರಸಧಾರೆ
ಗಿರಿಧರಿಯ ತೆಕ್ಕೆಯಲ್ಲಿ
ನೊರೆಹಾಲ ಹರಿಸುತ್ತ
ಜೀವ ಸಂಕುಲಗಳಿಗೆ
ಅಮೃತವನುಣಿಸುತ್ತ
ಭೋರ್ಗರೆದು ಧುಮುಕಿ
ಬಡಬಡಿಸಿ ಹರಿದು
ಪ್ರಕೃತಿ ಮಾತೆಗೆ
ಹಸುರುಡುಗೆಯನುಡಿಸಿ
ಕೊರೆದು ಗಿರಿಕಂದರವ
ಸುರಿದು ಧರೆಯೊಳಗಿಳಿದು
ವೈಯಾರದಲಿ ಹರಿದು
ಮುದನೀಡಿ ಮನಕೆ
ಎಲ್ಲೆಲ್ಲೋ ಹರಿದು
ಹೂವಂತೆ ಬಿರಿದು
ನಡೆಸಿದೆ  ಚಾರಣವ
ಸೆಳೆದಿದೆ  ತನ್ನತ್ತ
ಎಲ್ಲರ ನೋಟ
ಜಲಲ ಜಲಲ ಜಲಧಾರೆ

         ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ