144 ಮೌನ ಮಾತಾದಾಗ

ಮನದೊಳಗೆ ಅಡಗಿದ್ದ ಮೌನ ಮಾತಾದಾಗ
*************************************

ಮನದೊಳಗೆ ಅಡಗಿದ್ದ ಮೌನ ಮಾತಾದಾಗ
ಸಂತಸದಿ ಸಡಗರದಿ ನಲಿದಿದ್ದೆ ನಾ
ಮಾತೆಲ್ಲ ಮರೆತು ಮೌನ ಹೆಪ್ಪಿಟ್ಟಾಗ
ನೋವಿನ ಬೆಂಕಿಯಲಿ ಬೆಂದಿದ್ದೆ ನಾ

ನಿನ್ನ ಮೌನವೇ ದಹಿಸುವ ಸುಡುಬೆಂಕಿ
ಪ್ರೀತಿಯ ಮಾತಲ್ಲವೇ ನಲ್ಲ ತನ್ನೆಳಲು
ಮೌನದ ತೆರೆಸರಿಸಿ ನೀನೊಮ್ಮೆ ನಕ್ಕಾಗ
ನಲ್ಲ ಬಾಳೆಲ್ಲ ಬೆಳದಿಂಗಳ ತಂಪೆರಲು

ಏನಿಹುದು ಬೇಸರ ನನ್ನೊಡನೆ ಮುನಿಸು
ಮಾತು ಮರೆಯುವಷ್ಟು ಮನವು ಕಠೋರವೇ?
ಬಿಡು ಮೌನ ಗೆಳೆಯಾ ನಗುವಿರಲಿ ಮೊಗದಲ್ಲಿ
ನನ್ನ ಕ್ಷಮಿಸೆಂದು ಬೇಡುವೇ ಸಾಕಲ್ಲವೇ?

ನಿನ್ನೊಲವ ಕಣ್ಣೋಟ ಹೆಚ್ಚಿಸುವುದು ಎದೆಬಡಿತ
ಮನವು ಉಯ್ಯಾಲೆಯಲಿ ತೂಗಿದಂತೆ
ಸರಸ ಸಲ್ಲಾಪದ ಮುದವಿತ್ತ ಸಿಹಿನುಡಿಯು
ಸಂತಸದಿ ಬಾನಲ್ಲಿ ಬಾನಾಡಿ ತೇಲಿದಂತೆ

ಮರೆತುಬಿಡು ಗೆಳೆಯ ಮುದುಡಿಸುವ ಮೌನ
ಅನುರಣಿಸಲಿ ನಿತ್ಯ ಒಲವಗಾನ
ನಿನ್ನೊಂದು ಸಿಹಿಮಾತಿನಾ ಮಧುರಲಾಪನ
ನುಡಿಸುವುದು ಎದೆಯಲ್ಲಿ ತೊಂತನನ

            ಶೈಲೂ......
ಚಿತ್ರವನ್ನು ಗೂಗಲ್ ನಿಂದ ತೆಗೆದುಕೊಂಡದ್ದು

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು