143. ಗಜಲ್

ಗಝಲ್
*******

ಏಕೋ ಉದಾಸಭಾವ ಮನದಲ್ಲಿಂದು ಗೆಳೆಯಾ
ನೆನಪ ಭಾರದಲಿ ನಲುಗಿ ಸೋತೆನಿಂದು ಗೆಳೆಯಾ

ಬೇಡವೆಂದರೂ ಕಾಡುತಿಹೆ ಹೀಗೇಕೆ ಒಳನುಸುಳಿ
ಬಯಕೆಗಳ ಬೇಗೆಯಲ್ಲಿ  ನೊಂದೆನಿಂದು ಗೆಳೆಯಾ

ಏಕಾಂತದಾಸರೆಯ ಬಯಸುತ್ತಿದೆ ಜೀವ
ನನಸಾಗದ ಕನಸಲ್ಲೂ ಬಂದೆಯೇಕಿಂದು ಗೆಳೆಯಾ

ಅರಿತಿದೆ ಪ್ರಜ್ಞೆ ಕೈಗೆಟುಕದ ತಾರೆ ನೀನು
ಬೆರೆತಿದೆ ಹೃದಯ ಅಂಕೆಮೀರಿ ನಿನ್ನೊಳಗಿಂದು ಗೆಳೆಯಾ

ಬಿಗಿದು ಬಂಧಿಸಿಟ್ಟರೂ ಕೇಳದು ಶೈಲಳ ಮಾತು
ಎದೆಯಾಳದಲ್ಲಿ ಇಷ್ಟ ಮೂರ್ತಿ ನಿಂತೆಯೇಕಿಂದು ಗೆಳೆಯಾ

            ಶೈಲೂ......
ಚಿತ್ರ : ಗಣೇಶ ಪ್ರಸಾದ ಪಾಂಡೆಲು ಅವರ ವಾಲ್ನಿಂದ ತೆಗೆದುಕೊಂಡದ್ದು😊
ಥ್ಯಾಂಕ್ಯೂ ಪಾಂಡೆಲು ಸರ್🙏

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ