141 ಅವಿಭಕ್ತ ಕುಟುಂಬದಲ್ಲಿ ಸಂಕ್ರಾಂತಿ

ಅವಿಭಕ್ತ ಕುಟುಂಬದ ಅಕ್ಕರೆಯಲಿ ಸಕ್ಕರೆಯ ಸಂಕ್ರಾಂತಿ :---

ಅಂದಿತ್ತು ಮನೆಯಲ್ಲಿ ತುಂಬಿದ ಜನಸಂಗ
ಅವಿಭಾಜ್ಯ ಕುಟುಂಬದ ಖುಷಿಯ ಉತ್ತುಂಗ
ಹಬ್ಬ ಹರಿದಿನದಲೂ ದಿಬ್ಬಣದ ಸಂಭ್ರಮ
ರಕ್ತ ಸಂಬಂಧಿಗಳ ನಲಿವಿನ ಸಂಗಮ

ದೊಡ್ಡದಾದ ಮನೆ ಅದಕ್ಕಿಂತ ಮನ ಹಿರಿದು
ಸಂತೋಷ ಸಂಭ್ರಮದ ಜಾತ್ರೆ ಹಿರಿದು
ಇರಲಿಲ್ಲ ಯಾರೊಬ್ಬರಲೂ ಬೇಧಭಾವ
ಪ್ರೀತಿ ಪ್ರೇಮ ವಾತ್ಸಲ್ಯ ಮಮತೆಗಿರಲಿಲ್ಲ ಅಭಾವ

ಹಿರಿಯರಾಣತಿಗಿತ್ತು ಹಿರಿದಾದ ಗೌರವ
ಕಿರಿಯರ ಕೈಹಿಡಿದು ದಡತಲುಪಿಸುವ ಹಿರಿಜೀವ
ಒಬ್ಬೊಬ್ಬರದ್ದೊಂದೊಂದು ಜವಾಬ್ದಾರಿ ಕೆಲಸ
ಸಹಕಾರವಿತ್ತು ಎಲ್ಲರಲೂ ಇರಲಿಲ್ಲ ವಿರಸ

ಹಬ್ಬ ಬಂತೆಂದರೆ  ಮೃಷ್ಟಾನ್ನದ ತಯಾರಿ
ತರತರದ ಅಡುಗೆಗಳಿಗೆ ಅಜ್ಜಿ ರೂವಾರಿ
ಎಷ್ಟುoಡರೂ ಮಮತೆಯಲುಣಲಿಕ್ಕುವ ತಾಯಿ
ಆ ಅಮೃತದ ಸವಿ ರುಚಿಯ ಅಳೆಯಲಾರದು ಬಾಯಿ

ಅವಿಭಕ್ತ ಕುಟುಂಬದ ಅಕ್ಕರೆಯಲಿ ನಾ ಕಂಡೆ
ಪ್ರೀತಿಯಕ್ಕರೆಯ ಬೆರೆಸಿದ ಸಕ್ಕರೆಯ ಸಂಕ್ರಾಂತಿ
ಸಾಟಿಯಿಲ್ಲವು ಬೇರೆ ಕೂಡಿಬಾಳುವ ಬದುಕಿಗೆ
ಬಂಧವಿರದ ವಿಭಕ್ತ ಕುಟುಂಬದಲ್ಲೇನಿದೆ ಸುಖ..ಬಿಡು ಭ್ರಾಂತಿ

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ