139. ಸಂಕ್ರಾಂತಿ

ಸಂಕ್ರಾಂತಿ
**********

ಸುಗ್ಗಿಯ  ಸಂಭ್ರಮಕೆ
ಸಂತಸದ ಸಂಕ್ರಾಂತಿ
ಉತ್ತರಾಯಣದ ಕಡೆಗೆ
ರವಿಯ ಪಥ ಬದಲಿಸುವ
ಮಕರ ಸಂಕ್ರಾಂತಿ

ಎಳ್ಳು ಕಡಲೆಯ ಜೊತೆಗೆ
ಬೆಲ್ಲ ಹದ ಬೆರೆಸಿ
ರುಚಿಗೆ ಕೊಬ್ಬರಿ  ಸೇರಿ
ಫಲದೊಡನೆ ಎರೆದು
ಸಂಭ್ರಮಿಸೋ ಸಂಕ್ರಾಂತಿ

ಕಬ್ಬಿನ ರಸ ಜೊತೆಗೆ
ಸಿಹಿ ಸಕ್ಕರೆಯಚ್ಚಿನ
ಸವಿ ಮೆದ್ದು  ಮೆದ್ದು
ಒಳ್ಳೊಳ್ಳೆ ಹಿತ ಮಾತಿನ ಜತೆ
ಸಡಗರದ ಸಂಕ್ರಾಂತಿ

ಗೋಮಾತೆ ಪೂಜೆಯ ಜೊತೆ
ಕಿಚ್ಚು ಹಾಯಿಸುವ ಕಥೆ
ಬಣ್ಣ ಬಣ್ಣದ  ರಂಗೋಲಿ ಎಳೆ
ಸಿಹಿ ಹುಗ್ಗಿ ಕಡಲೆ ಅವರೆ
ಮೆಲ್ಲುತ ನಲಿವ  ಸಂಕ್ರಾಂತಿ

ಸುಗ್ಗಿ ಸಂಭ್ರಮದ ಜೊತೆ
ರಾಗ ದ್ವೇಷವ ಮರೆತು
ಎಲ್ಲರೊಂದಿಗೆ ಕಲೆತು
ಸಿಹಿಯಂತೆ ಜೊತೆ ಬೆರೆತು
ಸಂಭ್ರಮಿಸೋ ಸಂಕ್ರಾಂತಿ

            ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ