138 ಕನ್ನಡಿ

ಕನ್ನಡಿ
*****
ನಿಜದ ಸ್ನೇಹಿತನಿವನು
ನಕ್ಕಾಗ ನಕ್ಕು ಅತ್ತಾಗ ಅಳುವನು
ಭ್ರಮೆಯ ಅಮಲನು ಕಳಚಿ
ವಾಸ್ತವವ ತೆರೆದಿಡುವವನು

ನಿಜದ ಬಿಂಬವ ಸೆರೆಹಿಡಿದು
ತೋರಿಸುವನವ ಪ್ರತಿಬಿಂಬ
ಚಿತ್ತದೊಳಗಿರುವ ಭಿತ್ತಿಯನು
ತೆರೆತೆರೆದು ತೋರಿಸುವನವ

ಅಂಕುಡೊಂಕುಗಳ ಶಂಕೆಯಿಲ್ಲದೆ
ಹಿಡಿದೆತ್ತಿ ಅಣಕಿಸುವವ
ಅಂಟಿದ ಕಲೆಗಳ ನಂಟನು
ನೆಟ್ಟಗೆ ರೂಪಿಸುವವ

ಅಂತೆಯೇ ಮುಖವೂ ಕೂಡ
ಮನದ ಭಾವ ಬಿಂಬಿಸುವ ಕನ್ನಡಿ
ನಯನದ್ವಯಗಳೇ ಭಾವನೆಗಳ
ಭಾಷ್ಯಕ್ಕೆ ಬರೆದ ಮುನ್ನುಡಿ

           ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ