135. ಗಜಲ್

ಗಝಲ್
*******
ಮನದಲಿ ಏನೋ ಅಸ್ಪಷ್ಟ ಚಿತ್ರವಿದೆ ಅದು ನೀನೇ ಏನು
 ಕನವರಿಕೆಯಲೂ ಯಾವುದೋ ಹೆಸರಿದೆ ಅದು ನೀನೇ ಏನು

ಎದೆಯೊಳೊಂತರದಾ ಭಾವ ಅರ್ಥವಾಗದ ತುಮುಲ
ಮುಚ್ಚಿದ ಕಣ್ಣೊಳಗೆ ನಿಂತ ಆ ಪ್ರತಿಮೆಯಿದೆ ಅದು ನೀನೇ ಏನು

ಕಾಡುವ ನೆನಪುಗಳ ಹುಚ್ಚಾಟ ಮನದ ತೊಳಲಾಟ
ಅನುರಣಿಸಿ ನಾಮ ಕೂಗುತಿದೆ ಅದು ನೀನೇ ಏನು

ಎದೆಯ ನೋವುಗಳೆಲ್ಲ ಕರಗಿ ತೊರೆಯಾಗಿ ಹರಿದಿದೆ
ಆವರಿಸಿ ಅದಾವುದೋ ಕೈಯಿದೆ ಅದು ನೀನೇ ಏನು

ಒಡಲಲ್ಲಿ ಅದಾವುದೋ ಮೊರೆತ ಚಂದದ ಕಾಗುಣಿತ 
ಶೈಲೂವಿನ ಜತೆಯಲಿ ಮಿಳಿತವಿದೆ ಅದು ನೀನೇ ಏನು

             ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು