133 ಏನೆನ್ನಬಹುದು
*************
ಏನೆಂದು ಹೆಸರಿಸಲಿ ಈ ದಿವ್ಯ ಅನುಭವಕೆ
ಏನೆಂದು ಕರಿಬಹುದು ನವಿರಾದ ಭಾವನೆಗೆ
ಕಾತರತೆಯಿಹುದು ದರುಶನ ಭಾಗ್ಯಕೆ
ಆತುರತೆಯಿಹುದು ಕರ್ಣಾಮೃತದ ಕರೆಗೆ
ಹೂವಂತೆ ಅರಳುವುದು ಮನ
ನಿನ್ನಹೆಸರ ನೆನೆದಾಕ್ಷಣ ವೇ
ಇದನೇನೆಂದು ಕರೆಯಲಿ ನಾ
ಇದು ಪ್ರೀತಿ ಇರಬಹುದೇ ????
ಮನತುಂಬಿ ಹರಿಯುವುದು
ಕಡಲೆಡೆಗೆ ನದಿ ಹರಿದಂತೆ
ತನುವರಳಿ ನಲಿಯುವುದು
ಹೂವರಲಿ ನಗುವಂತೆ
ಹೊಸಕನಸು ಮೂಡುವುದು
ಜೋಕಾಲಿ ಜೀಕಿದಂತೆ
ಇದನೇನೆಂದು ಕರೆಯಲಿ ನಾ
ಇದು ಪ್ರೇಮ ಇರಬಹುದೇ ???
ನೀ ಅತ್ತರೆ ಮನ ಮುದುಡುವುದು
ಹೂ ನಲುಗಿ ಹೋದಂತೆ
ನೀ ನಕ್ಕರೆ ಬಾಳು ಬೆಳಗುವುದು
ಬಾನಲ್ಲಿ ಹೊಂಬೆಳಕು ಹರಿದಂತೆ
ಚಿಂತೆಯ ಒಂದೆಳೆ ಕಂಡರೂ ನಾ
ನೀರಿಲ್ಲದ ಮೀನಂತೆ ಮಿಡುಕುವುದು
ಇದ ಕರೆಯಲಿ ನಾ ಏನೆಂದು
ಇದು ಒಲವು ಇರಬಹುದೇ???
ಶೈಲೂ......
Comments
Post a Comment