130. ಅನಾಮಿಕ

#ಅನಾಮಿಕ
*********

ಮುಖವನ್ನೇ ತೋರಿಸದೆ
ಕೆದಕಿ ಭಾವನೆಯನ್ನು
ತುಂಬಿ ಮನದ ತುಂಬ
ಮಂದಹಾಸ ಬೀರುವವ
ಯಾರಿವ..??  ಅನಾಮಿಕ..!

ಅಲ್ಲೆಲ್ಲೋ ದೂರದಲೇ ನಿಂತು
ಬುಗುರಿಯಂತೆ ಅಡಿಸುವವ
ಕಲ್ಪನೆಗೆ ಜೀವ.ತುಂಬಿ
ಆವರಿಸಿಬಿಟ್ಟಿದ್ದಾನೆ ನನ್ನನವ
ಯಾರಿವ..??  ಅನಾಮಿಕ..!

ಹೂವಿನಂತ ಮನಸಿನವ
ಜೇನಿನಂಥ ಮಾತಿನವ
ಸೊಗಸುಗಾರ ಸುಂದರಾಂಗ
ಮನದಲ್ಲಿ ನೆಲೆನಿಂತವ
ಯಾರಿವ..??  ಅನಾಮಿಕ..!

ಹಾಸ್ಯಗಾರ ಜಾಣ
ನಗಿಸುವುದರಲ್ಲಿ ನಿಪುಣ
ಅವನಿದ್ದರೇನೇ ಪರಿಪೂರ್ಣ
ಮುಖತೋರಿಸದೆಯೇ ಕಾಡುವವ
ಯಾರಿವ..??  ಅನಾಮಿಕ..!

          ಶೈಲೂ......
Shylaja Ramesh

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ