129 ಕಿವಿಮಾತು

ಕಿವಿಮಾತು
*********

ಅಂಧಕಾರವ ಸರಿಸು
ಧೃಡಹೆಜ್ಜೆಯನಿರಿಸು
ತಂತಾನೇ ಹೊಳೆಯುವುದು
ಬಾಳಲ್ಲಿ ಬೆಳಕು...

ನಡೆವ ಹಾದಿಯಲುಂಟು
ಕಲ್ಲು ಮುಳ್ಳುಗಳ ನಂಟು
ಸರಿಸುತ್ತ ನಡೆದರಿಹುದು
ಗೆಲುವೆಂಬ ಬೆಳಕು...

ನಿನ್ನನನುಸರಿಸುವವರಿಗೆ
ನೀನಾಗು ಮಾದರಿ
ನುಂಗುತ್ತ ಒಳಗೊಳಗೇ
ಒಡಲೊಳಗೆ ದಳ್ಳುರಿ...

ಹರಿತ ನಂಜು ನಾಲಿಗೆಗೆ
ಆಹಾರವಾಗಬೇಡ
ಗಟ್ಟಿ ಮಾಡಿಕೋ ಮನವ
ದುರುಳಜನರ ಮೆಟ್ಟಿನಿಲ್ಲು...

ಮೃದುಮನದ ಹೂ ನೀನು
ಮುಳ್ಳಾಗು ಒಮ್ಮೊಮ್ಮೆ
ಕಿತ್ತು ನೋಯಿಸುವವರ
ಕೈ ಚುಚ್ಚಿ ಧಿಕ್ಕರಿಸಿ ಬಿಡು...

ಸಜ್ಜಿಗೆಯ ಸಿಹಿಯಾಗು
ಸಜ್ಜನರ ಸವಿ ನುಡಿಗೆ
ತಲೆಬಾಗು ಸಂಯಮದಿ
ಗುರುಹಿರಿಯರಾಣತಿಗೆ...

ದಯೆಯಲಿಹುದು ಸದ್ಧರ್ಮ
ಅದುವೇ ಜೀವನದ ಮರ್ಮ
ಸದ್ವಚನದಾಂಮೃತಪಾನ
ಅದರ್ಶಜೀವನಕೆ ಸೋಪಾನ...
       ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ