123 ಮಹಿಳೆ

ಎಲ್ಲ ಸಹೋದರಿಯರಿಗೂ ಅಂತಾರಾಷ್ಟ್ರೀಯ ಮಹಿಳಾದಿನದ ಶುಭಾಶಯಗಳು
ಮಹಿಳೆ
******
ಮನೆಯ ಕಣ್ಣಿವಳು
ಎಲ್ಲರ ಒಲುಮೆಯ ಹೆಣ್ಣು
ಅಪ್ಪಿ ಹರಸುವ ಮಾತೇ
ಕುಟುಂಬದ ಶಕ್ತಿಧಾತೆ

ಮಗಳು ಮಡದಿ ಮಾತೆ
ಮನೆಮನೆಯ ಸಿರಿವಂತೆ
ಮಹಿಳೆಯಿದ್ದರೇ ಮನೆಯು
ಮನೆಯಜಮಾನನ ಸಿರಿಯು

ದುಃಖ ಸಹಿಷ್ಣು ಆಕೆ
ಎಲ್ಲ ನೋವನು ಅದುಮಿಟ್ಟು
ನಗುನಗುತಲೆ ಇರುವಳು
ಕಷ್ಟ ಕೋಟಲೆ ಬದಿಗಿಟ್ಟು

ಭೂಮಿಯಷ್ಟು ಸಹನೆ
ಜರಿವವರನೂ ಮನ್ನಿಸಿ
ತೋರುವಳು ಕರುಣೆ
ನೊಂದವರ ಆಲಂಗಿಸಿ

ಎಣೆಯುಂಟೆ ಮಹಿಳೆ ನಿನಗೆ
ಯಾರಿಲ್ಲ  ಸರಿಸಮಕೇ
ಕ್ಷಮಯಾಧರಿತ್ರಿ ನೀನೇ
ಉಪಮೆ ನೀ ಭೂಮಿ ತೂಕಕೆ

ಮೀಸಲಂತೆ ನಿನಗೀದಿನ
ಎಲ್ಲೆಲ್ಲೂ ನಿನದೇ ಹಾಡು
ನೀನಿಲ್ಲದಿದ್ದರೇ ಪ್ರತಿದಿನ
ಸಂಸಾರಕೆ ನಾಯಿ ಪಾಡು

            ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ