120. ಕಾರ್ಮಿಕ
#ಶೀರ್ಷಿಕೆ_ #ಕಾರ್ಮಿಕ
ಕಾರ್ಮಿಕ ನೀ ಬಾಳ ಬಂಡಿಯ ಚಾಲಕ
ನೀನೇ ತಾನೇ ದೇಶದ ಉನ್ನತಿಯ ಪಾಲಕ
ನೀ ಹರಿಸಿದರೆ ಬೆವರು ದೇಶ ಸಂಪತ್ತಿನ ತವರು
ನಿನ್ನ ಪರಿಶ್ರಮದ ನೆರಳಲಿ ಬದುಕುವರು ಶ್ರೀಮಂತರು
ಶೈಲೂ.....
ಭಾವನೆಗಳ ಭಾವಗೀತೆ ******************** ಬರಿದೇ ನೆನಪುಗಳ ಸುಳಿಯಲ್ಲಿ ಸಿಕ್ಕಿ ಹುಡುಕಿ ತಡಕಾಡಿ ಅಕ್ಷರಗಳ ಹೆಕ್ಕಿ ಮನದೊಳಗಿನ ಭಾವ ಪದಗಳಲಿ ತುರುಕಿ ಸುಖದುಃಖಗಳಲೆಯಲಿ ಮುಳುಗೇಳಿ ತೇಲಿ ಮನದೊಳಗಿನ ಪ್ರೀತಿಯನು ಮೊಗೆಮೊಗೆದು ನೀಡಿ ಸ್ನೇಹ ಕಾರಂಜಿಯ ರಸಧಾರೆ ಸಿಂಪರಿಸಿ ನೋವು ನಲಿವುಗಳ ಅಳೆದಳೆದು ತೂಗಿ ತೋಚಿದ್ದನ್ನು ಗೀಚುವ *ಸಂಚಯ ಕವನ ಸಂಕಲನವೇ* ನನ್ನ ಭಾವನೆಗಳ ಭಾವಗೀತೆ..!!
Comments
Post a Comment