118 ಕೇಳಿಸದೇ ಕರೆ

ಕೇಳಿಸದೇ ಕರೆ
************

ಕೇಳಿಸದೇ ಇನಿಯಾ ಒಲವ ಕರೆಯೋಲೆ
ಒಲುಮೆಯಲಿ ಕಾಯ್ದೆ ಹಿಡಿದು ಹೂ ಮಾಲೆ

ಹಾಸಿದ್ದೆ ಹೂ ರಾಶಿ ನೀ ಬರುವ ಹಾದಿಯಲಿ
ಘಮ್ಮೆನ್ನೋ ಸುಮರಾಜಿ ಅರಳಿತ್ತು ಆಸೆಯಲಿ

ಅರೆಬಿರಿದ ಅಧರದಲಿ ನಿಂನ್ಹೆಸರ ಗುನುಗುತಲಿ
ಆಸೆ ಕಂಗಳ ತೆರೆದು ಕಾಯುತಿಹೆ ಪ್ರೀತಿಯಲಿ

ದಿಟ್ಟಿಸಿ ನೋಡುತಿಹೆ ದೂರ ತೀರದ ತನಕ
ಬಾರದಿಹೆಯೇಕೆ ಸಖಾ ಬೇಡವೇ ಸನಿಹ

ಬರುವೆಯೆಂದೆನ್ನುವುದು ಬರೀ ಬೆರಗು ಮಾತೇನು?
ಬಣ್ಣನೆಗೂ ಮೀರಿದ ಪ್ರೀತಿ ತುಟಿಯಂಚಿನ ನುಡಿಯೇನು?

ಕನಸು ತುಂಬಿ ಕಣ್ಣಲ್ಲಿ ಕಾಯುತಿಹೆ ನಿನಗಾಗಿ
ಕಿರುನಗೆಯ ಪರಿಯನ್ನು ಕಾಣುವಾ ಸಲುವಾಗಿ

ಕಣೆಗಣಿಸದಿರು ಕರೆಯ ನೀನೆನ್ನ ಪ್ರಿಯಬಂಧು
ಬಾಡಿದ ಮೊಗದಲ್ಲಿ ನಗುತುಂಬು ಬಳಿಬಂದು

         ಶೈಲೂ.......
( ಚಿತ್ರ ನಾಗೇಶ್ ಸರ್ ವಾಲಿಂದ ತೊಗೊಂಡಿದ್ದು)

ಥ್ಯಾಂಕ್ಯೂ ನಾಗೇಶ್ ಸರ್🙏💐😊

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು