113.ಮನವೊಂದು ಮರ್ಕಟ



ಮನವೊಂದು ಮರ್ಕಟ
********************

ಮನವೊಂದು ಮರ್ಕಟ
ಅದಕಿಲ್ಲ ನಿರ್ಬಂಧ
ಅಲ್ಲೊಮ್ಮೆ ಇಲ್ಲೊಮ್ಮೆ ನೆಗೆಯುತಿಹುದು

ಚಂಚಲತೆ ಮನದಲ್ಲಿ
ದೃಢವಿಲ್ಲ ನಿಲುವಿನಲ್ಲಿ
ನಾನೆಂಬ  ಹಮ್ಮಿನಲಿ  ಮೆರೆಯುತಿಹುದು

ಅರಿವಿರದ ಪದಗಳಲ್ಲಿ
ಚಿತ್ತಚಾಂಚಲ್ಯದಲಿ
ಗುರಿಯಿರದ  ಹಾದಿಯಲಿ ನಡೆಯುತಿಹುದು

ಅಮೃತತೆಯ ಫಲಬಿಟ್ಟು
ಕಂಡದ್ದೆ  ಸಿಹಿಯೆಂದು
ಸಿಕ್ಕೆಡೆಗೆ ಕೈಚಾಚಿ  ನಡೆಯುತಿಹುದು

ಹೇ ದೇವ  ಕರುಣಿಸೋ
ಹಾಕದಕೆ ಕಡಿವಾಣ
ಘೋರ ಶಿಕ್ಷೆಯ ನೀಡಿ 
ಮುನ್ನಡೆಸು  ಕೈ ಹಿಡಿದೆಂದು ಬೇಡುತಿಹುದು.......
                         ಶೈಲೂ.........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ