111 ದಾರಿ

ದಾರಿ


ಬಾಳ ಹಾದಿಯಲಿ 
ತಂಪು ಸೂಸುವ ಸಾಲುಮರ
ಕೈಬೀಸಿ ಕರೆಯುತಿದೆ
ನಿಚ್ಚಳದ ಹಾದಿಯ ಹಂದರ

ಕ್ರಮಿಸುವಾಯಾಸವ ತೋರಗೊಡದ
ಸ್ವಚ್ಛ ಸುಂದರ ದಾರಿ
ಅಡೆತಡೆಗಳೇನೇ ಇದ್ದರೂ
ನಿಶ್ಚಯವಿರಲಿ ಸೇರುವ ಗುರಿ

ಒಬ್ಬೊಬ್ಬರದೊಂದೊಂದು
ಗುರಿಮುಟ್ಟುವ ತೀರ
ಸೇರುವ ಗಮ್ಯ ಸುಗಮವಾಗಲಿ
ಆಗದಂತೆ.ಬಹು ಭಾರ

ನಡೆವ ದಾರಿಯಲಿ ಸೋಲುಗೆಲುವಿನ
ತಿರುವುಗಳು ಸಹಜ
ಜಾಣ್ಮೆಯಿಂದ  ಸರಿಸಿ
ಸಹನೆಯಿಂದ ಸಾಗಬೇಕು ಮನುಜ

ರಮ್ಯ ಮನೋಹರ , ಸಮರಸದ
ಭಾವೈಕ್ಯದ ನಡಿಗೆ
ಇಲ್ಲದಿದ್ದರೆ ಎಡರು ತೊಡರುಗಳು
ನಡಿಗೆಯಲ್ಲಿ ಅಡಿಗಡಿಗೆ

ಎನಿತು ಮಂದಿ ಸಾಗಿಹರೋ
ಗಮ್ಯ ಅರಸುತ ಈ ದಾರಿಯಲಿ
ಕ್ರಮಿಸಬೇಕು ನಾವೂ ಉನ್ನತಿಯೆಡೆಗೆ
ಭವಬಂಧನವ ಕಳಚುತಲಿ

ಅದೆಷ್ಟು ಜನರ ಬಾಳ ಹಾದಿಗೆ
ಸಾಕ್ಷಿ ಯಾಯಿತೋ ಈ ಕಾನನದ ದಾರಿ
ನಡೆವ ಮನುಜರಿಗೆಲ್ಲ ಸ್ಪಷ್ಟ ಸುಗಮ
ಸ್ವಚ್ಛ ಹಾದಿಯ ತೋರಿ

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ