109💐ಶುದ್ಧವಿರಲಿ💐

💐ಶುದ್ಧವಿರಲಿ💐
 ***************

ನಮ್ಮ ಯೋಚನೆಯಂತೆಯೇ
ನಾವೆಸಗುವ ಕಾರ್ಯ. ..!!
ಯೋಚನಾಲಹರಿ ಶುದ್ಧವಿರಲಿ..

ನಮ್ಮ ಮನಸ್ಸಿನಂತೆಯೇ
ನಾವಾಡುವ ಮಾತು...!!
ಮನಸ್ಸಿನ ಮೇಲೆ ಹಿಡಿತವಿರಲಿ..

ನಮ್ಮ ಮಾತಿನಂತೆಯೇ
ನಮ್ಮ ನಡೆಯಿಹುದು...!!
ಮಾತಿನಲ್ಲಿ ಸಿಹಿಯಿರಲಿ..

ನಮ್ಮ ನಡೆಯಂತೆಯೇ
ನಮ್ಮ ಗುಣವಿಹುದು...!!
ನಡೆಯಲ್ಲಿ ಜಾಗೃತವಿರಲಿ...

ನಮ್ಮ ಗುಣದಂತೆಯೇ
ಗುರಿಯ ಹಾದಿಯಿಹುದು...!!
ಗುಣವಂತನಾಗು ಸಭ್ಯತೆಯಿರಲಿ...

            ಶೈಲೂ.......

Comments

Popular posts from this blog

197 ತವರ ಸೆಳೆತ

330 ನಾ ಕಂಡ ಕನಸು

219 ಕದನ