107 ಅರಿವಾಯ್ತು

ಅರಿವಾಯ್ತು


ಅರಿವಾಯ್ತು ನಿಜದ ನೆಲೆ
ಪ್ರೀತಿಯದು ಬತ್ತದ ಸೆಲೆ
ಅದರೆಲ್ಲಿದೆ ಪ್ರೀತಿಗೆ ಬೆಲೆ.?

ಬರುವಾಗಲೂ  ಒಬ್ಬಂಟಿ
ಹೋಗುವಾಗ ಸಹ ಒಂಟಿ
ನಡುವೆ ಸಂಬಂಧಗಳ ಜಂಟಿ

ಸುತ್ತಲೂ ಬಂಧುಬಾಂಧವರು
ಅವಶ್ಯಕತೆ ಇದ್ದಾಗಷ್ಟೇ ನೆಂಟರು
ಪ್ರಾಣ ಹಿಂಡುವ ಭಂಟರು

ಹಿತವರಾರೂ ಇಲ್ಲ ಇಲ್ಲಿ
ಬಾಂಧವ್ಯದ ನೆಪದಲ್ಲಿ
ಬೆನ್ನಿರಿವ ಮಂದಿಯೇ ಇಲ್ಲಿ

ಪ್ರತಿಮಾತಿಗೂ ನೋವು ಪೆಟ್ಟು
ಅದಕೆ ಸಹಾನುಭೂತಿಯ ಹೆಸರಿಟ್ಟು
ಮಾತಲ್ಲೇ ಚುಚ್ಚಿ ಕೊಲ್ಲುವ ಕಸರತ್ತು

ಶುದ್ಧಪ್ರೀತಿಗಾರೂ ಅರ್ಹರಲ್ಲ
ಅವಕಾಶವಾದಿಗಳೇ ಇಲ್ಲೆಲ್ಲಾ
ಸಹನೆ  ಸಾವಕಾಶ  ತಿಳಿದಿಲ್ಲ

ಅರಿಯಬೇಕು ಬದುಕುವ ಬಗೆ
" ನೀ ನನಗಿದ್ದರೆ ನಾ  ನಿನಗೆ "
ಆಗಲೇ ದೂರಾಗುವುದು ಬೇಗೆ

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ